alex Certify
ಕನ್ನಡ ದುನಿಯಾ       Mobile App
       

Kannada Duniya

ಡಾಮಿನೋಸ್ ಪಿಜ್ಜಾ ತಿನ್ನುವ ಮೊದಲು ಇದನ್ನೋದಿ

ಬದಲಾಗುತ್ತಿರುವ ಜೀವನ ಶೈಲಿಯ ಜೊತೆಗೆ ಭಾರತೀಯರ ಆಹಾರ ಕೂಡ ಬದಲಾಗಿದೆ. ಪಿಜ್ಜಾ, ಬರ್ಗರ್ ಮೇಲೆ ಭಾರತೀಯರ ಒಲವು ಹೆಚ್ಚಾಗಿದೆ. ಪಿಜ್ಜಾ ಪ್ರಿಯರು ಬಾಯಿ ಚಪ್ಪರಿಸಿಕೊಂಡು ಇದನ್ನು ತಿನ್ನುತ್ತಾರೆ. ಆದ್ರೆ ನಿಮ್ಮ ನೆಚ್ಚಿನ ಪಿಜ್ಜಾದಲ್ಲಿ ಜೀವಂತ ಹುಳುಗಳು ಸಿಕ್ರೆ ಹೇಗಾಗಬೇಡ?

ದೆಹಲಿಯ ನಿವಾಸಿ ರಾಹುಲ್ ಎಂಬಾತನಿಗೆ ಡಾಮಿನೋಸ್ ಪಿಜ್ಜಾ ಮಸಾಲೆ ಪ್ಯಾಕ್ ನಲ್ಲಿ ಹುಳುಗಳು ಸಿಕ್ಕಿವೆ. ಪ್ಯಾಕೆಟ್ ಒಡೆಯುತ್ತಿದ್ದಂತೆ ಹುಳಗಳು ಕಾಣಸಿಕ್ಕಿದ್ದು, ಇದ್ರ ವಿಡಿಯೋ ಹಾಗೂ ಫೋಟೋವನ್ನು ಸಾಮಾಜಿಕ ಜಾಲತಾಣಕ್ಕೆ ಹರಿಬಿಡಲಾಗಿದೆ.

ಭಾರತೀಯ ಡಾಮಿನೋಸ್ ಪಿಜ್ಜಾ ಪ್ರೇಮಿಗಳೆ ಎಚ್ಚರ. ಅವ್ರು ತಿನ್ನಲು ನಿಮಗೆ ಇದನ್ನು ಕೊಡ್ತಿದ್ದಾರೆಂದು ಶೀರ್ಷಿಕೆ ಹಾಕಿ ವಿಡಿಯೋ ಹಾಗೂ ಫೋಟೋವನ್ನು ಪೋಸ್ಟ್ ಮಾಡಲಾಗಿದೆ. ರಾಹುಲ್ ಪೋಸ್ಟ್ ಗೆ ಡಾಮಿನೋಸ್ ಕ್ಷಮೆ ಕೇಳಿದೆ. ಹಾಗೆ ತನಿಖೆಗೆ ಆದೇಶ ನೀಡಿದೆ. ರಾಹುಲ್ ಗ್ರಾಹಕರ ವ್ಯವಹಾರ ಇಲಾಖೆಗೆ ದೂರು ನೀಡಿದ್ದು, ಉತ್ತರದ ನಿರೀಕ್ಷೆಯಲ್ಲಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...