alex Certify
ಕನ್ನಡ ದುನಿಯಾ       Mobile App
       

Kannada Duniya

ಪಿಜ್ಜಾ ಚೀಸ್ ನಲ್ಲಿ ದೋಷ- ಕೋರ್ಟ್ ನಿಂದ ದಂಡ…!

ಡೊಮಿನೋಸ್ ಪಿಜ್ಜಾ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ….ಅದ್ರಲ್ಲೂ ಬಾಯಲ್ಲಿ ನೀರೂರಿಸುವ ಸಾಕಷ್ಟು ವೆರೈಟಿ ಯಮ್ಮಿ ಯಮ್ಮಿ ಪಿಜ್ಜಾಗಳನ್ನು ಗ್ರಾಹಕರಿಗೆ ನೀಡುತ್ತಿರೋ ಡೊಮಿನೋಸ್ ಪಿಜ್ಜಾ ಅಂದ್ರೆ ಬಾಯಲ್ಲಿ ನೀರೂರೋದು ಸಹಜ.

ಆದರೆ ಡೊಮಿನೋಸ್ ಪಿಜ್ಜಾಕ್ಕೆ ಬಳಸುವ ಚೀಸ್ ಆಹಾರ ಪ್ರಯೋಗಾಲಯದಲ್ಲಿ ಈ ಹಿಂದೆ ಪರೀಕ್ಷೆಗೊಳಪಡಿಸಿದಾಗ ದೋಷಗಳು ಕಂಡುಬಂದಿವೆ. ಇಲ್ಲಿ ಬಳಸಲಾಗುವ ಡೈಸಡ್ ಸುಪೆರ್ ಸ್ಟ್ರೆಟ್ಜ್ ಮೊಜಾರೆಲ್ಲ ಚೀಸ್ನಲ್ಲಿ ಹಾಲಿನಲ್ಲಿರುವ ಕೊಬ್ಬಿನಂಶದ ಪ್ರಮಾಣ ಕನಿಷ್ಠ ಶೇ. 35 ಕ್ಕಿಂತ ಕಡಿಮೆ ಇರುವುದು ಕಂಡುಬಂದಿದೆ.

ಈ ಹಿನ್ನೆಲೆಯಲ್ಲಿ ಪುಣೆಯ ಡೊಮಿನೋಸ್ ಔಟ್ಲೆಟ್ ಹಾಗೂ ಅದರ ಮಾರಾಟಗಾರರಿಗೆ ಶಹಜಾನ್ಪುರದ ಜಿಲ್ಲಾ ವಿಭಾಗೀಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯ 9.50 ಲಕ್ಷ ರೂಪಾಯಿ ದಂಡ ವಿಧಿಸಿದೆ. 2015ರಲ್ಲೇ ಈ ಪಿಜ್ಜಾದ ಸ್ಯಾಂಪಲ್ ಅನ್ನು ಆಹಾರ ಸಂರಕ್ಷಣಾ ಅಧಿಕಾರಿ ಯುಗುಲ್ ಕಿಶೋರ್ ಎಂಬುವವರು ವಾರಣಾಸಿಯ ಸರ್ಕಾರಿ ಆಹಾರ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದರು. ಆಗಲೇ ಚೀಸ್ ಲ್ಯಾಬ್ ಪರೀಕ್ಷೆಯಲ್ಲಿ ಫೇಲ್ ಆಗಿತ್ತು. ಅದಾದ ಬಳಿಕ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗಿ ವಿಚಾರಣೆ ಬಳಿಕ ಡೊಮಿನೋಸ್ ದಂಡ ಕಟ್ಟಬೇಕಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...