alex Certify
ಕನ್ನಡ ದುನಿಯಾ       Mobile App
       

Kannada Duniya

ಅನ್ನವಿಕ್ಕಿದ ಮನೆಗೇ ಕನ್ನ ಹಾಕಿದ ಕೆಲಸಗಾರ

ನೇಪಾಳ ಮೂಲದ ಮನೆ ಕೆಲಸಗಾರನೊಬ್ಬ ತನ್ನ ಸಂಗಡಿಗರೊಂದಿಗೆ ಸೇರಿ ತಾನು ಕೆಲಸಕ್ಕಿದ ಮನೆಗೇ ಕನ್ನ ಹಾಕಿದ್ದಾನೆ. ಇಬ್ಬರು ಸಂಗಡಿಗರೊಂದಿಗೆ ಸೇರಿ ಬರೋಬ್ಬರಿ 50 ಲಕ್ಷ ರೂ. ಮೌಲ್ಯದ ನಗ-ನಗದು ದೋಚಿಕೊಂಡು ಪರಾರಿಯಾಗಿದ್ದಾನೆ.

ಪಂಜಾಬ್ ನ ಲೂಧಿಯಾನದ ಮಾಡೆಲ್ ಹೌಸ್ ನಲ್ಲಿ ಈ ಘಟನೆ ನಡೆದಿದ್ದು, ಮುಕೇಶ್ ಸಾಹ್ನಿ ಎಂಬವರ ಮನೆಯಲ್ಲಿ ಕೆಲ ತಿಂಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ನೇಪಾಳಿ ಕೆಲಸಗಾರ ಮನೆಯಲ್ಲಿ ಮಾಲೀಕರಿಲ್ಲದ ಸಮಯದಲ್ಲಿ ಇತರೆ ಕೆಲಸಗಾರರಿಗೆ ಮತ್ತು ಬರುವ ಪದಾರ್ಥ ತಿನ್ನಿಸಿ ಈ ಕೃತ್ಯವೆಸಗಿದ್ದಾನೆ.

ಶನಿವಾರಂದು ಈ ಘಟನೆ ನಡೆದಿದ್ದು, ತನ್ನ ಮೂವರು ಸಂಗಡಿಗರೊಂದಿಗೆ ದರೋಡೆ ಕೃತ್ಯವೆಸಗಿರುವ ಈತ ಸುಮಾರು 50 ಲಕ್ಷ ರೂ. ಮೌಲ್ಯದ ನಗ-ನಗದು ದೋಚಿಕೊಂಡು ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಸಿ ಟಿವಿ ದೃಶ್ಯಾವಳಿಗಳನ್ನಾಧರಿಸಿ ಆರೋಪಿಗಳ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...