alex Certify
ಕನ್ನಡ ದುನಿಯಾ       Mobile App
       

Kannada Duniya

ದೆಹಲಿಗೆ ಬಂದಿದ್ದ ಯುನೆಸ್ಕೋ ಪ್ರತಿನಿಧಿ ಮೇಲೆ ನಾಯಿ ದಾಳಿ

ದೆಹಲಿಯಲ್ಲಿ ಯುನೆಸ್ಕೋ ಪ್ರತಿನಿಧಿಗೆ ನಾಯಿ ಕಡಿದ ಹಿನ್ನೆಲೆಯಲ್ಲಿ ಶ್ವಾನ ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದೆ. ಡಿಸೆಂಬರ್ ನಲ್ಲಿ ಯುನೆಸ್ಕೋ ಪ್ರತಿನಿಧಿ ಶಿಗೆರು ಅಯೋಗಿ ಅವರಿಗೆ ದೆಹಲಿಯ ಲೋಧಿ ಗಾರ್ಡನ್ ನಲ್ಲಿ ನಾಯಿ ಕಚ್ಚಿತ್ತು.

ಗೌರವ್ ದಯಾಳ್ ಎಂಬುವವರು ಸಾಕಿದ್ದ ನಾಯಿ ಇದು. ನಾಯಿ ಕಡಿತದಿಂದ ಶಿಗೆರು ಗಾಯಗೊಂಡಿದ್ದರು. ಈ ಬಗ್ಗೆ ಪೊಲೀಸರಿಗೆ ಅವರು ದೂರು ನೀಡಿದ್ದಾರೆ. ಮಾಲೀಕ ಗೌರವ್ ದಯಾಳ್ ಹೆಸರನ್ನೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಶ್ವಾನ ಇತರರಿಗೆ ತೊಂದರೆ ಮಾಡದಂತೆ ಕಾಳಜಿ ವಹಿಸಬೇಕಿತ್ತು ಅಂತಾ ಬರೆದಿದ್ದಾರೆ.

ಕಳೆದ ಜನವರಿ 31ರಂದು ದೆಹಲಿ ಪೊಲೀಸರು ಈ ಬಗ್ಗೆ ಎಫ್ ಐ ಆರ್ ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 289/337ರ ಅಡಿಯಲ್ಲಿ ಕೇಸ್ ದಾಖಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...