alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿ ಪದವಿಯ ಮಾಹಿತಿ ನೀಡದ ದೆಹಲಿ ವಿವಿ

modi degree

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ದೆಹಲಿ ವಿಶ್ವವಿದ್ಯಾಲಯದಿಂದ ದೂರ ಶಿಕ್ಷಣದಲ್ಲಿ ಪದವಿ ಪಡೆದಿದ್ದಾರೆ ಎನ್ನಲಾಗಿದ್ದು, ಈ ಕುರಿತಂತೆ ಮಾಹಿತಿ ಹಕ್ಕು ಕಾರ್ಯಕರ್ತರೊಬ್ಬರಿಗೆ ಮಾಹಿತಿ ನೀಡಲು ವಿವಿ ನಿರಾಕರಿಸಿದೆ.

1978ರಲ್ಲಿ ದೆಹಲಿ ವಿಶ್ವವಿದ್ಯಾಲಯದ ದೂರಶಿಕ್ಷಣ ವಿಭಾಗದಿಂದ ಬಿಎ ಪದವಿ ಪಡೆದಿರುವುದಾಗಿ ನರೇಂದ್ರ ಮೋದಿ ಚುನಾವಣೆ ಸಂದರ್ಭದಲ್ಲಿ ಸಲ್ಲಿಸಿದ ಅಫಿಡವಿಟ್ ನಲ್ಲಿ ತಿಳಿಸಿದ್ದರು. ಈ ಬಗ್ಗೆ ದೆಹಲಿ ನಿವಾಸಿ ಹನ್ಸ್ ರಾಜ್ ಎಂಬುವವರು ಮಾಹಿತಿ ಹಕ್ಕು ಕಾಯ್ದೆಯಡಿ ದೆಹಲಿ ವಿವಿಗೆ ಅರ್ಜಿ ಸಲ್ಲಿಸಿ 1978ರಲ್ಲಿ ನರೇಂದ್ರ ಮೋದಿ ಪದವಿ ಪಡೆದಿದ್ದಾರೆಯೇ ಎಂದು ಕೇಳಿದ್ದು, ಅದರ ಮಾಹಿತಿಯನ್ನು ನೀಡಲು ವಿವಿ ನಿರಾಕರಿಸಿದೆ. ರೋಲ್ ನಂಬರ್ ಇದ್ದರೆ ಮಾತ್ರ ಮಾಹಿತಿ ನೀಡಬಹುದು ಎಂದು ತಿಳಿಸಿದೆ.

ಹನ್ಸ್ ರಾಜ್ ಅವರು ನರೇಂದ್ರ ಮೋದಿ ಹೆಸರಿನಲ್ಲಿ ಎಷ್ಟು ಮಂದಿ ಪದವಿ ಪಡೆದಿದ್ದಾರೆ ಎಂದು ಮಾಹಿತಿ ಕೋರಿದ್ದರು. ಇದನ್ನು ನೀಡಲು ನಿರಾಕರಿಸಿದ ವಿಶ್ವವಿದ್ಯಾಲಯ ರೋಲ್ ನಂಬರ್ ಇಲ್ಲದ ಕಾರಣ ಮಾಹಿತಿ ಹುಡುಕಲು ಸಾಧ್ಯವಿಲ್ಲ ಎಂದು ಹೇಳಿರುವುದಾಗಿ ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...