alex Certify
ಕನ್ನಡ ದುನಿಯಾ       Mobile App
       

Kannada Duniya

ಪತಿ ಜೋಕ್ ಕೇಳಿ ಪತ್ನಿ ಮಾಡಿದ್ಲು ಇಂಥ ಕೆಲಸ

ಇಂದೋರ್ ನಲ್ಲಿ ವೈದ್ಯರ ಪತ್ನಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. ವಿಷ ಸೇವಿಸಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಗಿದ್ದು ಪತಿಯ ಜೋಕ್.

ಮಹಾನಂದ್ ನಗರದಲ್ಲಿ ಚರ್ಮರೋಗ ತಜ್ಞರಾಗಿರುವ ಡಾ. ನಳಿನ್ ಪತ್ನಿ ಸೋನಾ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಸೋನಾಳ ಹಲ್ಲು ಹಾಳಾಗಿತ್ತು. ಮಂಗಳವಾರ ಆಕೆಯನ್ನು ದಂತ ವೈದ್ಯರ ಬಳಿ ಕರೆದುಕೊಂಡು ಹೋಗಿದ್ದರಂತೆ ನಳಿನ್. ಮೇಲಿನ ಹಲ್ಲು ಹಾಳಾಗಿದ್ದು, ಹಲ್ಲು ಕಿತ್ತು ನಕಲಿ ಹಲ್ಲು ಜೋಡಿಸುವುದಾಗಿ ವೈದ್ಯರು ಹೇಳಿದ್ದಾರೆ.

ಮನೆಗೆ ಬಂದ ನಳಿನ್ ಹಲ್ಲಿನ ವಿಚಾರಕ್ಕೆ ಜೋಕ್ ಮಾಡಿದ್ದಾರೆ. ಹಲ್ಲು ಕಿತ್ತ ನಂತ್ರ ಫೋಟೋ ಹೊಡೆದು ನನ್ನ ಪತ್ನಿಗೆ ವಯಸ್ಸಾಯ್ತು ಅಂತಾ ವಾಟ್ಸಾಪ್ ಗೆ ಹಾಕ್ತೇನೆ ಎಂದಿದ್ದಾರೆ. ನಳಿನ್ ಜೋಕ್ ಕೇಳಿ ರೂಮಿಗೆ ಹೋದ ಪತ್ನಿ ಕೆಲ ಸಮಯದ ನಂತ್ರ ವಾಪಸ್ ಬಂದು ವಿಷ ಸೇವಿಸಿರುವುದಾಗಿ ಹೇಳಿದ್ದಾಳೆ.

ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯ್ತಾದ್ರೂ ಯಾವುದೇ ಪ್ರಯೋಜನವಾಗಲಿಲ್ಲ. ಜೋಕನ್ನು ಪತ್ನಿ ಗಂಭೀರವಾಗಿ ಪರಿಗಣಿಸಿ ಪ್ರಾಣ ಕಳೆದುಕೊಳ್ತಾಳೆಂಬುದು ಗೊತ್ತಿದ್ದರೆ ಜೋಕ್ ಮಾಡ್ತಿರಲಿಲ್ಲವೆಂದು ಪತಿ ಕಣ್ಣೀರು ಹಾಕ್ತಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...