alex Certify
ಕನ್ನಡ ದುನಿಯಾ       Mobile App
       

Kannada Duniya

ಈತನನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ ವೈದ್ಯರು

needle

ರಾಜಸ್ತಾನದ ಕೋಟಾದಲ್ಲಿ ವೈದ್ಯರೇ ಬೆಚ್ಚಿ ಬೀಳುವಂತಹ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬನ ದೇಹದಲ್ಲಿ 150 ಸೂಜಿಗಳು ಪತ್ತೆಯಾಗಿವೆ. ಸೂಜಿಗಳು ದೇಹದೊಳಗೆ ಪ್ರವೇಶಿಸಿದ್ದು ಹೇಗೆ ಅನ್ನೋದು 56 ವರ್ಷದ ಬದ್ರಿಲಾಲ್ ಮೀನಾಗೂ ಗೊತ್ತಿಲ್ಲ.

ಕೈಗಳು, ಪಾದ, ಕುತ್ತಿಗೆ, ಶ್ವಾಸಕೋಶ ಮತ್ತು ಅಪಧಮನಿಯಲ್ಲಿ ಕೂಡ ಸೂಜಿ ಚುಚ್ಚಿಕೊಂಡಿತ್ತು. 150ರಲ್ಲಿ ಒಂದು ಸೂಜಿ ತುಕ್ಕು ಹಿಡಿದಿದ್ದು, ಸುಮಾರು 6 ತಿಂಗಳ ಹಿಂದೆಯೇ ಅದು ದೇಹ ಹೊಕ್ಕಿರಬಹುದೆಂದು ವೈದ್ಯರು ಶಂಕಿಸಿದ್ದಾರೆ.

ಈ ಸೂಜಿಗಳನ್ನು ಹೊರತೆಗೆಯಲು ಒಟ್ಟು 6 ಆಸ್ಪತ್ರೆಗಳಿಗೆ ಬದ್ರಿಲಾಲ್ ಅಲೆದಿದ್ದಾರೆ. 150 ಸೂಜಿ ದೇಹದೊಳಗೆ ಚುಚ್ಚಿಕೊಂಡಿದ್ರೂ ಬದ್ರಿಲಾಲ್ ಸುರಕ್ಷಿತವಾಗಿರುವುದು ನಿಜಕ್ಕೂ ಚಮತ್ಕಾರ ಅಂತಾ ವೈದ್ಯರು ಹೇಳಿದ್ದಾರೆ. ಆಸ್ಪತ್ರೆಯ ಅಲೆದಾಟ ಹಾಗೂ ಶಸ್ತ್ರಚಿಕಿತ್ಸೆಯಿಂದ ಆತ 31 ಕೆಜಿ ತೂಕ ಕಳೆದುಕೊಂಡಿದ್ದಾನೆ.

ಸದ್ಯಕ್ಕೆ 91 ಸೂಜಿಗಳನ್ನು ಹೊರತೆಗೆಯಲಾಗಿದೆ. ದೇಹದ ಬಹು ಸೂಕ್ಷ್ಮ ಜಾಗಗಳಲ್ಲಿ ಸೂಜಿ ಚುಚ್ಚಿಕೊಂಡಿದ್ದು, ಅದನ್ನು ಹೊರತೆಗೆಯುವುದು ವೈದ್ಯರಿಗೂ ಸವಾಲಾಗಿ ಪರಿಣಮಿಸಿದೆ. ಬದ್ರಿಲಾಲ್ ಗೆ ಸೂಜಿ ಚುಚ್ಚಿಕೊಳ್ಳುವ ಅಭ್ಯಾಸ ಇಲ್ಲ ಎನ್ನುತ್ತಾರೆ ಮನೆಯವರು. ಆದ್ರೆ ಕೆಲವರು ಖಿನ್ನತೆಗೆ ಒಳಗಾಗಿ ಇಂತಹ ಕೆಲಸ ಮಾಡುತ್ತಾರೆ ಅನ್ನೋದು ವೈದ್ಯರ ಅನುಮಾನ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...