alex Certify
ಕನ್ನಡ ದುನಿಯಾ       Mobile App
       

Kannada Duniya

ಹೃದಯದಲ್ಲಿ ಸಿಲುಕಿತ್ತು 4 ಸೆಂ.ಮಿ. ಉದ್ದದ ಕಬ್ಬಿಣದ ತುಂಡು…!

ಜೀವನದಲ್ಲಿ ವಿಧಿ ಕಣ್ಣಾಮುಚ್ಚಾಲೆ ಆಡುತ್ತದೆ. ಜನ, ಕೆಲವೊಮ್ಮೆ ವಿಧಿಯ ಕೈಯಿಂದ ಕೊಂಚದರಲ್ಲೇ ಪಾರಾಗಿ ಬಿಡ್ತಾರೆ. ರೋಗಿಯನ್ನು ಉಳಿಸಲು ವೈದ್ಯರು ಸವಾಲುಗಳನ್ನು ಎದುರಿಸಿ ಯಶ ಕಂಡಿದ್ದಾರೆ. ಇಂತಹ ಘಟನೆಗಳಿಗೆ ಈಗ ಮತ್ತೊಂದು ಪ್ರಕರಣ ಸೇರಿಕೊಳ್ಳುತ್ತದೆ.

ಗ್ರೇಟರ್ ನೋಯ್ಡಾದ ಸತೀಶ್ ಕುಮಾರ್, ಡ್ರಿಲ್ ಮಾಡುವಾಗ, ಡ್ರಿಲ್ ಮುರಿದು 4 ಸೆಂ.ಮಿ. ಉದ್ದದ ಕಬ್ಬಿಣದ ತುಂಡು ಅವರ ಹೃದಯದ ಬಲಭಾಗಕ್ಕೆ ನಾಟಿದೆ. ಸತೀಶ್ ಜೀವನ್ಮರಣದ ಹೋರಾಟ ನಡೆಸಿದ್ದರು.

ವೈದ್ಯರಿಗೆ ಜೀವಂತ ಹೃದಯದಿಂದ ಕಬ್ಬಿಣದ ರಾಡ್ ತೆಗೆಯುವುದು ಸವಾಲಾಗಿತ್ತು. ಈ ಸವಾಲನ್ನು ಮೆಟ್ಟಿ ನಿಂತ ವೈದ್ಯರ ತಂಡ, ಸತೀಶ್ ಅವರಿಗೆ ಮರುಜನ್ಮ ನೀಡಿದೆ. ಹೃದಯಕ್ಕೆ ಬುಲೆಟ್ ಹೊಡೆದರೆ ಹೇಗೆ ವ್ಯಕ್ತಿ ಬದುಕಿ ಉಳಿಯುವುದು ಕಷ್ಟವೋ, ಅಂತಹದ್ದೇ ಪ್ರಕರಣ ಇದಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...