alex Certify
ಕನ್ನಡ ದುನಿಯಾ       Mobile App
       

Kannada Duniya

ಕಟ್ ಆದ ಕಾಲೇ ಗಾಯಾಳುವಿಗೆ ದಿಂಬು

ಝಾನ್ಸಿ: ವೈದ್ಯರು, ಆಸ್ಪತ್ರೆಯಲ್ಲಿನ ಯಡವಟ್ಟುಗಳ ಕಾರಣದಿಂದ ಆಗಾಗ ಸುದ್ದಿಯಲ್ಲಿರುವ ಉತ್ತರಪ್ರದೇಶದಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದೆ.

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕನ ಕಾಲು ಕತ್ತರಿಸಿದ ವೈದ್ಯರು, ದಿಂಬು ಇಲ್ಲದ ಕಾರಣಕ್ಕೆ ಕತ್ತರಿಸಿದ ಕಾಲನ್ನೇ ಗಾಯಾಳುವಿಗೆ ದಿಂಬನ್ನಾಗಿ ಇಟ್ಟಿದ್ದಾರೆ.

ಝಾನ್ಸಿ ಜಿಲ್ಲೆಯ ಮೌರಾನ್ಪುರ್ ಲ್ಲಿ ನಡೆದ ಅಪಘಾತದಲ್ಲಿ ಯುವಕನ ಕಾಲಿಗೆ ಹಾನಿಯಾಗಿದ್ದು, ಕೂಡಲೇ ಆತನನ್ನು ಆಸ್ಪತ್ರೆಗೆ ಕರೆತರಲಾಗಿದೆ. ಆತನಿಗೆ ಶಸ್ತ್ರಚಿಕಿತ್ಸೆ ನಡೆಸಿ ಕಾಲು ತೆಗೆಯಲಾಗಿದೆ. ಬಳಿಕ ಅದೇ ಕಾಲನ್ನು ದಿಂಬಿನಂತೆ ಇಡಲಾಗಿದೆ. ಈ ದೃಶ್ಯಗಳು ವೈರಲ್ ಆಗಿದ್ದು, ಪ್ರಕರಣ ಬೆಳಕಿಗೆ ಬರುತ್ತಲೇ ತನಿಖೆಗೆ ಆದೇಶಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...