alex Certify
ಕನ್ನಡ ದುನಿಯಾ       Mobile App
       

Kannada Duniya

ಆಪರೇಷನ್ ವೇಳೆ ವೈದ್ಯರಿಂದಾಯ್ತು ಯಡವಟ್ಟು

rimsn-dd

ರಾಂಚಿ: ಆಪರೇಷನ್ ಮಾಡುವ ಸಂದರ್ಭದಲ್ಲಿ ವೈದ್ಯರಿಂದ ಯಡವಟ್ಟಾದ ಅನೇಕ ಪ್ರಕರಣಗಳು ನಡೆದಿವೆ. ಅಂತಹ ಪ್ರಕರಣವೊಂದರ ಮಾಹಿತಿ ಇಲ್ಲಿದೆ.

ಜಾರ್ಖಂಡ್ ನಲ್ಲಿ ಬಲ ಕಿಡ್ನಿಗೆ ಆಪರೇಷನ್ ಮಾಡುವ ಬದಲು, ವೈದ್ಯರು ಯಡವಟ್ಟಿನಿಂದ ಎಡ ಭಾಗದ ಕಿಡ್ನಿಯ ಶಸ್ತ್ರಚಿಕಿತ್ಸೆ ನೆರವೇರಿಸಿದ್ದಾರೆ. ರಾಂಚಿಯ ರಾಜೇಂದ್ರ ವೈದ್ಯಕೀಯ ವಿಜ್ಞಾನಗಳ ಸಂಶೋಧನಾ ಸಂಸ್ಥೆಯ ವೈದ್ಯರು ಇಂತಹ ಯಡವಟ್ಟು ಮಾಡಿದವರು.

ಗುಡಿಯಾ ಬಾಯಿ ಎಂಬ ಮಹಿಳೆಯ ಎಡಭಾಗದ ಕಿಡ್ನಿಯಲ್ಲಿ ಕಲ್ಲು ಕಾಣಿಸಿಕೊಂಡಿದ್ದು, ವೈದ್ಯರು ಪರೀಕ್ಷೆಯ ಬಳಿಕ ಆಪರೇಷನ್ ಮಾಡಲು ಮುಂದಾಗಿದ್ದಾರೆ. ಆದರೆ ಆಪರೇಷನ್ ಮಾಡುವಾಗ, ಬಲ ಕಿಡ್ನಿಯ ಆಪರೇಷನ್ ಮಾಡಿದ್ದಾರೆ ಎಂದು ಗುಡಿಯಾ ಬಾಯಿ ಪತಿ ಪ್ರದೀಪ್ ಕುಮಾರ್ ತಿಳಿಸಿದ್ದಾರೆ.

ಘಟನೆ ಬೆಳಕಿಗೆ ಬಂದ ಬಳಿಕ ಆಸ್ಪತ್ರೆಯ ಆಡಳಿತ ಮಂಡಳಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...