alex Certify
ಕನ್ನಡ ದುನಿಯಾ       Mobile App
       

Kannada Duniya

ಎಕ್ಸ್-ರೇ ನೋಡಿ ಮಹಿಳೆ ತಲೆಸುತ್ತಿ ಬಿದ್ದಿದ್ದೇಕೆ?

0_1491024834_1491052617_749x421

ಗುಜರಾತ್ ನಲ್ಲಿ ವೈದ್ಯರ ನಿರ್ಲಕ್ಷ್ಯದ ಭಯಾನಕ ಸತ್ಯ ಹೊರಬಿದ್ದಿದೆ. ಏಕ್ಸ್ ರೇ ಸಮಯದಲ್ಲಿ ಮಹಿಳೆ ಹೊಟ್ಟೆಯಲ್ಲಿ ಕತ್ತರಿ ಇರುವುದು ಪತ್ತೆಯಾಗಿದೆ. ಐದು ವರ್ಷಗಳ ಹಿಂದೆ ಮಹಿಳೆ ಆಸ್ಪತ್ರೆಯೊಂದರಲ್ಲಿ ಶಸ್ತ್ರಚಿಕತ್ಸೆಗೊಳಗಾಗಿದ್ದಳು. ಈ ವೇಳೆ ಕತ್ತರಿಯನ್ನು ಹೊಟ್ಟೆಯೊಳಗೇ ಬಿಟ್ಟಿದ್ದಾರೆ ವೈದ್ಯರು.

ಘಟನೆ ನಡೆದಿರೋದು ಅಹಮದಾಬಾದ್ ಆಸ್ಪತ್ರೆಯಲ್ಲಿ. 2012ರಲ್ಲಿ ಕಿಬ್ಬೊಟ್ಟೆ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ಸಿವಿಲ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ನಾಲ್ಕು ಕೆಜಿ ಗಡ್ಡೆಯನ್ನು ಹೊರಗೆ ತೆಗೆಯಲಾಗಿತ್ತು. ಆದ್ರೆ ಶಸ್ತ್ರಚಿಕಿತ್ಸೆ ವೇಳೆ ನಿರ್ಲಕ್ಷ್ಯವಹಿಸಿದ ವೈದ್ಯರು ಕತ್ತರಿಯನ್ನು ಹೊಟ್ಟೆಯಲ್ಲಿಯೇ ಬಿಟ್ಟಿದ್ದಾರೆ.

ಶಸ್ತ್ರಚಿಕಿತ್ಸೆ ನಡೆದ್ರೂ ಮಹಿಳೆಗೆ ಹೊಟ್ಟೆ ನೋವು ಕಡಿಮೆಯಾಗಿರಲಿಲ್ಲ. ಇತ್ತೀಚೆಗೆ ನೋವು ಹೆಚ್ಚಾಗಿತ್ತು. ಮತ್ತೆ ಆಸ್ಪತ್ರೆಗೆ ಬಂದಾಗ ವೈದ್ಯರು ಎಕ್ಸ್ ರೇ ಮಾಡಿದ್ದಾರೆ. ಆಗ ಕತ್ತರಿ ಇರುವುದು ಕಂಡು ಬಂದಿದೆ. ಈ ಸುದ್ದಿ ತಿಳಿದ ಮಹಿಳೆ ಅಲ್ಲಿಯೇ ತಲೆಸುತ್ತಿ ಬಿದ್ದಿದ್ದಾಳೆ. ಅವಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯದಲ್ಲಿಯೇ ಶಸ್ತ್ರಚಿಕಿತ್ಸೆ ನಡೆಯಲಿದೆ. ಸಾಮಾನ್ಯವಾಗಿ ಹೊಟ್ಟೆಯಲ್ಲಿ ಕಬ್ಬಿಣದ ವಸ್ತುವಿದ್ದರೆ ಆ ವ್ಯಕ್ತಿ ಐದು ವರ್ಷ ಬದುಕ್ತಾನೆ ಎನ್ನುತ್ತಾರೆ ವೈದ್ಯರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...