alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ಮರಣೋತ್ತರ ಪರೀಕ್ಷೆ ನಡೆಸಲು 5 ಸಾವಿರ ಕೇಳಿದ ವೈದ್ಯ

ಹೈದರಾಬಾದ್‌: ಅಫಘಾತದಲ್ಲಿ ಮೃತಪಟ್ಟ ಆಟೋ ಚಾಲಕನ ಮರಣೋತ್ತರ ಪರೀಕ್ಷೆ ನಡೆಸಲು ವಿಜಯವಾಡದ ಸರಕಾರಿ ವೈದ್ಯ 5 ಸಾವಿರ ರೂ. ಲಂಚ ಕೇಳಿದ್ದಾನೆ. ಮರಣೋತ್ತರ ಪರೀಕ್ಷೆ ನಡೆಸಬೇಕಾದರೆ, ಹಣ ನೀಡಬೇಕು. 5 ಸಾವಿರ ರೂ. ಗಿಂತ ಕಡಿಮೆ ಮೊತ್ತವನ್ನು ಮುಟ್ಟುವುದೇ ಇಲ್ಲ ಎಂದೂ ವೈದ್ಯ ಕುಟುಂಬಕ್ಕೆ ಧಮಕಿ ಹಾಕಿದ್ದಾನೆ.

ಈ ಸಂಬಂಧ ಆಟೋ ಚಾಲಕನ ಕುಟುಂಬ ಪ್ರತಿಭಟನೆ ನಡೆಸಿದೆ. ವಿಷಯ ಅರಿತ ಆರೋಗ್ಯ ಇಲಾಖೆ, ವೈದ್ಯನನ್ನು ಅಮಾನತುಗೊಳಿಸಿದೆ. ಸಿದ್ಧಾರ್ಥ ಮೆಡಿಕಲ್‌ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕರಾಗಿರುವ ಡಾ. ಬಿ. ಶ್ರೀನು ನಾಯಕ್‌, ವಿಜಯವಾಡದ ಸರಕಾರಿ ಆಸ್ಪತ್ರೆಯಲ್ಲಿ ವಿಧಿ ವಿಜ್ಞಾನ ವಿಭಾಗದಲ್ಲೂ ಸೇವೆ ಸಲ್ಲಿಸುತ್ತಿದ್ದರು.

ಶ್ರೀನು ಲಂಚ ಕೇಳುತ್ತಿರುವ ವಿಡಿಯೋ ಪುರಾವೆಯಾಗಿ ನೀಡಲಾಗಿತ್ತು. ಆ.18ರಂದು ಶಿವಪ್ರಸಾದ್‌ ಎಂಬ ಆಟೋ ಚಾಲಕ, ಬೈಕ್‌ನಲ್ಲಿ ಸಾಗುತ್ತಿದ್ದಾಗ ಅಪಘಾತವಾಗಿ ಆಸ್ಪತ್ರೆಗೆ ದಾಖಲಾಗಿದ್ದ. ಆ.27 ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ.

ಮೃತನ ಕುಟುಂಬ ವೈದ್ಯನಿಗೆ 2 ಸಾವಿರ ರೂ. ನೀಡಲು ಮುಂದಾಗಿತ್ತಾದರೂ, ಸ್ವೀಕರಿಸಿಲ್ಲ ಎಂದು ಕುಟುಂಬ ವರ್ಗ ದೂರಿದೆ. ಭೀಮಾ ಯೋಜನೆಯಲ್ಲಿ 5 ಲಕ್ಷ ರೂ. ಸಿಗುತ್ತದೆ. ಇದರಲ್ಲಿ 5 ಸಾವಿರ ರೂ. ಕೊಡಲು ಏನು ಕಷ್ಟ ಎಂದು ವೈದ್ಯ ಕೇಳಿದ್ದಾನೆ ಎಂದು ಕುಟುಂಬ ವರ್ಗ ಆರೋಪಿಸಿದೆ. ಸಿಎಂ ಚಂದ್ರಬಾಬು ನಾಯ್ಡು ಅಪಘಾತದಲ್ಲಿ ಮರಣಿಸಿದ ಕುಟುಂಬಕ್ಕೆ ಆರ್ಥಿಕ ಸಹಾಯಕ್ಕಾಗಿ ಈ ಯೋಜನೆಯನ್ನು 3 ವರ್ಷದ ಹಿಂದೆ ಜಾರಿಗೊಳಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...