alex Certify
ಕನ್ನಡ ದುನಿಯಾ       Mobile App
       

Kannada Duniya

ವಾಟ್ಸ್ ಅಪ್ ಸಂದೇಶ ನೋಡಿ ಆತ್ಮಹತ್ಯೆ ಮಾಡಿಕೊಂಡ

ಇಂದೋರ್ ನಲ್ಲಿ ವೈದ್ಯನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತನ ಆತ್ಮಹತ್ಯೆಗೆ ಆತ ಮದುವೆಯಾಗಬೇಕಿದ್ದ ಹುಡುಗಿ ಕಳುಹಿಸಿದ ವಾಟ್ಸ್ ಅಪ್ ಸಂದೇಶ ಕಾರಣ ಎಂಬುದು ಬಹಿರಂಗವಾಗಿದೆ. ಮದುವೆಯಾಗಬೇಕಿದ್ದ ಹುಡುಗ ವಿಷ ಕುಡಿದು ಪ್ರಾಣ ಬಿಟ್ಟಿದ್ದಾನೆ.

ಖಾಸಗಿ ಆಸ್ಪತ್ರೆಯಲ್ಲಿ ವೈದ್ಯನಾಗಿದ್ದ ಹಿತೇಶ್ ಹಾಗೂ ಜೂಹಿಗೆ ನಿಶ್ಚಿತಾರ್ಥವಾಗಿತ್ತು. ಕೆಲವೇ ದಿನಗಳಲ್ಲಿ ಮದುವೆ ನಡೆಯಬೇಕಿತ್ತು. ಆದ್ರೆ ಮಾರ್ಚ್ 18ರಂದು ಬಂದ ವಾಟ್ಸ್ ಅಪ್ ಸಂದೇಶ ಹಿತೇಶ್ ಆತ್ಮಹತ್ಯೆಗೆ ಕಾರಣವಾಗಿದೆ. ಜೂಹಿ ತಾನು ತನ್ನ ಸ್ನೇಹಿತನನ್ನು ಮದುವೆಯಾಗ್ತಿದ್ದೇನೆ. ನೀನು ಬದುಕು ಇಲ್ಲ ಸಾಯಿ. ನನಗೆ ಯಾವ ವ್ಯತ್ಯಾಸವೂ ಆಗದು ಎಂದು ಸಂದೇಶ ಕಳುಹಿಸಿದ್ದಳು. ಜೊತೆಗೆ ಮದುವೆಯಾದ ಫೋಟೋ ಕಳುಹಿಸಿದ್ದಳು. ಇದ್ರಿಂದ ನೊಂದ ಹಿತೇಶ್ ವಿಷ ಕುಡಿದಿದ್ದಾನೆ.

ನಂತ್ರ ಸ್ನೇಹಿತರಿಗೆ ವಿಷ ಕುಡಿದ ವಿಷ್ಯ ಹೇಳಿದ್ದಾನೆ. ತಕ್ಷಣ ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆತ್ಮಹತ್ಯೆಗೆ ಕಾರಣ ಬಯಲು ಮಾಡಿದ್ದಾರೆ. ಹಾಗೆ ಜೂಹಿ ವಿರುದ್ಧ ಸೆಪ್ಟೆಂಬರ್ 18ರಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...