alex Certify
ಕನ್ನಡ ದುನಿಯಾ       Mobile App
       

Kannada Duniya

ರೋಗಿಯ ಸೋಗಿನಲ್ಲಿ ಬಂದವನು ವೈದ್ಯೆಗೆ ಮಾಡಿದ್ದೇನು?

doctor

ಚೆನ್ನೈನಲ್ಲಿ ರೋಗಿಯ ಸೋಗಿನಲ್ಲಿ ಬಂದ ವ್ಯಕ್ತಿಯೊಬ್ಬ ವೈದ್ಯೆಯೊಬ್ಬರ ಎರಡು ದುಬಾರಿ ಫೋನ್ ಗಳನ್ನು ಕದ್ದೊಯ್ದಿದ್ದಾನೆ. 31 ವರ್ಷದ ಡಾ.ಮೋಹನಪ್ರಿಯ ರಘುನಾಥ್, ಈಸ್ಟ್ ಸ್ಪರ್ ಟ್ಯಾಂಕ್ ರೋಡ್ ನಲ್ಲಿ ಸ್ಕಿನ್ ಕ್ಲಿನಿಕ್ ಒಂದನ್ನು ನಡೆಸ್ತಾ ಇದ್ರು. ಮಧ್ಯಾಹ್ನ 1 ಗಂಟೆ ವೇಳೆಗೆ ವ್ಯಕ್ತಿಯೊಬ್ಬ ಕ್ಲಿನಿಕ್ ಗೆ ಬಂದಿದ್ದ.

ತನಗೆ ಮಾತು ಬರುವುದಿಲ್ಲ, ಕಿವಿ ಕೂಡ ಕೇಳಿಸುವುದಿಲ್ಲ. ಹಣಕಾಸಿನ ಸಹಾಯ ಮಾಡಿ ಅಂತಾ ಚೀಟಿಯೊಂದರಲ್ಲಿ ಬರೆದು ತಂದಿದ್ದ. ಹಣ ಕೊಡಲು ನಿರಾಕರಿಸಿದ ಸಿಬ್ಬಂದಿ, ಅಲ್ಲಿಂದ ಹೊರಟು ಹೋಗುವಂತೆ ಸೂಚಿಸಿದ್ರು. ಆತ ಕೂಡ ಅಲ್ಲಿಂದ ತೆರಳಿದಂತೆ ನಟಿಸಿದ್ದ.

ಸ್ವಲ್ಪ ಹೊತ್ತಿಗೆ ವಾಪಸ್ ಬಂದು ರಿಸೆಪ್ಷನ್ ಬಳಿ ಲೆಟರ್ ಒಂದನ್ನು ಕೊಟ್ಟಿದ್ದ. ಆತ ರೋಗಿ ಎಂದುಕೊಂಡು ರಿಸೆಪ್ಷನಿಸ್ಟ್ ಅವನನ್ನು ವೈದ್ಯರ ಕೊಠಡಿಗೆ ತಪಾಸಣೆಗಾಗಿ ಕಳಿಸಿದ್ದಾಳೆ. ಕ್ಲಿನಿಕ್ ನಿಂದ ಹೊರಬೀಳುವ ಮುನ್ನ ಆತ ವೈದ್ಯೆಯ ಮೊಬೈಲ್ ಅನ್ನು ಜೇಬಿಗಿಳಿಸಿದ್ದ.

ಮೊಬೈಲ್ ಮಾಯವಾಗಿರೋದು ಗಮನಕ್ಕೆ ಬರ್ತಿದ್ದಂತೆ ವೈದ್ಯರು, ಸಿಬ್ಬಂದಿಗೆ ವಿಷಯ ತಿಳಿಸಿದ್ರು. ಕೊನೆಗೆ ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸರು ಕ್ಲಿನಿಕ್ ನ ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಆ ವ್ಯಕ್ತಿ ಹಲವು ಕಡೆಗಳಲ್ಲಿ ಇದೇ ರೀತಿ ವಂಚನೆ ಮಾಡಿದ್ದಾನೆ ಎನ್ನಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...