alex Certify
ಕನ್ನಡ ದುನಿಯಾ       Mobile App
       

Kannada Duniya

ಉತ್ತರ ಪ್ರದೇಶದಲ್ಲಿ ಡೆಂಗ್ಯೂಗೆ ವೈದ್ಯರೇ ಬಲಿ

ಉತ್ತರ ಪ್ರದೇಶದ ಬಡೋಹಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೈದ್ಯರೊಬ್ಬರು ಡೆಂಗ್ಯೂಗೆ ಬಲಿಯಾಗಿದ್ದಾರೆ. ಮೂರು ದಿನಗಳ ಹಿಂದಷ್ಟೇ ಅವರನ್ನು ವಾರಾಣಸಿಯ ಬಿಎಚ್‌ಯುಗೆ ದಾಖಲಿಸಲಾಗಿತ್ತು. ಆದರೂ ಬದುಕುಳಿಯಲಿಲ್ಲ.

ಅದೇ ಆರೋಗ್ಯದ ಕೇಂದ್ರದ ಇತರೆ ನಾಲ್ಕು ಸಿಬ್ಬಂದಿಗೆ ಕೂಡಾ ಡೆಂಗ್ಯೂ ಶಂಕೆಯಿದ್ದು, ಪರೀಕ್ಷೆ ನಡೆಸಲಾಗಿದೆ. ಇದರ ಬೆನ್ನಲ್ಲೇ ಗೋಪಿಗಂಜ್‌ನ 100 ಮನೆಗಳಲ್ಲಿ ಡೆಂಗ್ಯೂ ಪ್ರಕರಣಗಳಿವೆಯೇ ಎಂದೂ ತಪಾಸಣೆ ನಡೆಸಲಾಗಿದೆ.

ವಾರದ ಹಿಂದೆ ಜಿಲ್ಲೆಯಲ್ಲಿ ಡೆಂಗ್ಯೂಗೆ ಮಹಿಳೆಯೊಬ್ಬರು ಬಲಿಯಾಗಿದ್ದರು. ಡೆಂಗ್ಯೂ ಹರಡದಂತೆ ತಡೆಯಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮುಖ್ಯ ವೈದ್ಯಕೀಯ ಅಧಿಕಾರಿ ಸತೀಶ್ ಸಿಂಗ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...