alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಈ ಮಾದರಿ ವೈದ್ಯನ ಫೋಟೋ

ಮಲ್ಕಾನ್ ಗಿರಿ: ಗರ್ಭಿಣಿಯರು, ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಸರಿಯಾದ ವ್ಯವಸ್ಥೆಗಳಿಲ್ಲದೇ ಹೊತ್ತುಕೊಂಡೇ ಸಾಗಿದ ಅನೇಕ ಘಟನೆಗಳು ನಡೆದಿವೆ.

ಒಡಿಶಾದ ಮಲ್ಕಾನ್ ಗಿರಿಯ ನಕ್ಸಲ್ ಪೀಡಿತ ಪ್ರದೇಶದಲ್ಲಿ ತುರ್ತು ಚಿಕಿತ್ಸೆ ಅಗತ್ಯವಿದ್ದ ಮಹಿಳೆಯನ್ನು ಮಂಚದಲ್ಲಿ ಹೊತ್ತುಕೊಂಡು ಆಕೆಯ ಪತಿ ಹಾಗೂ ವೈದ್ಯ ಬರೋಬ್ಬರಿ 8 ಕಿಲೋ ಮೀಟರ್ ದೂರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಅರಣ್ಯದಲ್ಲಿರುವ ಕುಗ್ರಾಮವಾಗಿರುವ ಸಾಗರಿತಾದಲ್ಲಿನ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಪಾಫ್ಲುರ್ ಆಸ್ಪತ್ರೆಯ ವೈದ್ಯರಾದ ಓಂಕಾರ್ ಹೋಟಾ ಅವರಿಗೆ ಮಾಹಿತಿ ಸಿಕ್ಕಿದೆ.

ಓಂಕಾರ್ ತಡಮಾಡದೇ ಗ್ರಾಮಕ್ಕೆ ತೆರಳಿ ಗರ್ಭಿಣಿಯನ್ನು ಪರೀಕ್ಷಿಸಿ ಹೆರಿಗೆ ಮಾಡಿಸಿದ್ದಾರೆ. ಆದರೆ, ಹೆಚ್ಚಿನ ರಕ್ತಸ್ರಾವವಾಗಿ ಮಹಿಳೆ ಗಂಭೀರ ಸ್ಥಿತಿ ತಲುಪುತ್ತಿರುವುದು ಗಮನಕ್ಕೆ ಬಂದಿದೆ. ತಡಮಾಡದ ವೈದ್ಯ ಓಂಕಾರ್ ಮಂಚದಲ್ಲಿಯೇ ಮಹಿಳೆಯನ್ನು ಮಲಗಿಸಿಕೊಂಡು ಪತಿಯೊಂದಿಗೆ ಆಸ್ಪತ್ರೆಗೆ ತೆರಳಿದ್ದಾರೆ.

ಆಸ್ಪತ್ರೆಯಲ್ಲಿ ಮಹಿಳೆಗೆ ಸಕಾಲಕ್ಕೆ ಚಿಕಿತ್ಸೆ ನೀಡಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ತಾಯಿ, ಮಗು ಆರೋಗ್ಯವಾಗಿದ್ದಾರೆ. ಓಂಕಾರ್ ಹಾಗೂ ಮಹಿಳೆಯ ಪತಿ ಮಂಚವನ್ನು ಹೊತ್ತು ಸಾಗುತ್ತಿರುವ ದೃಶ್ಯವನ್ನು ಅಲ್ಲಿದ್ದವರೊಬ್ಬರು ಸೆರೆ ಹಿಡಿದು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದು ವೈರಲ್ ಆಗಿದೆ. ವೈದ್ಯ ಓಂಕಾರ್ ಅವರ ಮಾದರಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...