alex Certify
ಕನ್ನಡ ದುನಿಯಾ       Mobile App
       

Kannada Duniya

ಆಫೀಸಿನಿಂದ ನೀವು ‘ಇನ್ ಟೈಮ್’ ಗೆ ಹೊರಡ್ತೀರಾ? ಹಾಗಾದ್ರೆ ಈ ಸ್ಟೋರಿ ಓದಲೇಬೇಕು

ನೀವು ಆಫೀಸಿನಿಂದ ಬೇಗನೆ ಹೊರಟುಬಿಡ್ತೀರಾ. ಶಿಫ್ಟ್ ನಲ್ಲಷ್ಟೇ ಕೆಲಸ ಮಾಡ್ತೀರಾ. ನಿಮ್ಮ ಪಾಳಿಯಲ್ಲಿ ಎಲ್ಲಾ ಕೆಲಸ ಮುಗಿಸಿ ಶಿಫ್ಟ್ ಮುಗೀತಿದ್ದಂತೆ ಮನೆಗೆ ತೆರಳೋ ಸ್ವಭಾವ ನಿಮ್ಮದಾ ಇದರಿಂದ ನಿಮಗೆ ಯಾವುದೇ ಗಿಲ್ಟ್ ಫೀಲ್ ಅಗೋದಿಲ್ಲ ಅಂತ ಯೋಚಿಸೋರು ನೀವಾ?ಹಾಗಾದ್ರೆ ಖಂಡಿತ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿರೋ ಆ ಒಂದು ವಿಡಿಯೋವನ್ನ ನೀವು ನೋಡಲೇಬೇಕು.

ಕಚೇರಿಯಿಂದ ಲೇಟಾಗಿ ಹೊರಡುವವರಷ್ಟೇ ಕಚೇರಿಯ ನಿಷ್ಠಾವಂತ ಕೆಲಸಗಾರರಲ್ಲ. ಶಿಫ್ಟ್ ನಲ್ಲಿ ಕೆಲಸ ಮಾಡುವವರನ್ನ ಸಹೋದ್ಯೊಗಿಗಳು ಕಡೆಗಣ್ಣಿನಲ್ಲಿ ನೋಡೋಕೆ ಸಾಧ್ಯವೇ ಇಲ್ಲ ಅಂತ ಹೇಳುವ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ವಾಟ್ಸ್ ಯುವರ್ ಸ್ಟೇಟಸ್ ಹೆಸರಿನ ವೆಬ್ ಸಿರೀಸ್ ನ ಈ ವಿಡಿಯೋ ಈಗ ಶಿಫ್ಟ್ ನಲ್ಲಿ ಕೆಲಸ ಮಾಡುವ ಸೋ ಕಾಲ್ಡ್ ಹಾಫ್ ಡೇ ಎಂಪ್ಲಾಯ್ಸ್ ಗಳಿಂದ ಮಾತ್ರವಲ್ಲ ಎಲ್ಲರ ಮನಸ್ಸು ಗೆದ್ದುಬಿಟ್ಟಿದೆ. ಈಗಾಗ್ಲೇ ವಿಡಿಯೋಗೆ ಹತ್ತು ಲಕ್ಷಕ್ಕೂ ಹೆಚ್ಚಿನ ವ್ಯೂವ್ಸ್ ಮತ್ತು ಐದು ಲಕ್ಷಕ್ಕೂ ಹೆಚ್ಚಿನ ಶೇರ್ಸ್ ಸಿಕ್ಕಿದೆ.

ಸಂಜೆ ಶಿಫ್ಟ್ ಮುಗಿಸಿ ಹೊರಟ ಟಿಜೆ ಎಂಬ ಉದ್ಯೋಗಿಯೊಬ್ಬರನ್ನ ಆತನ ಸಹೋದ್ಯೋಗಿ ಮತ್ತೆ ಹಾಫ್ ಡೇ ಅಂತ ಕಿಚಾಯಿಸ್ತಾನೆ. ಆ ಮಾತಿಗೆ ಶಿಫ್ಟ್ ನಲ್ಲಿ ಕೆಲಸ ಮಾಡುವ ನಿಷ್ಠಾವಂತ ಸಹೋದ್ಯೋಗಿ ಕೊಡುವ ಉತ್ತರ ಈಗ ಎಲ್ಲರ ಹೃದಯಕ್ಕೂ ಹತ್ತಿರವಾಗಿಬಿಟ್ಟಿದೆ. ಪಾಳಿಯನ್ನೂ ಮೀರಿ ಕಚೇರಿಯಲ್ಲಿ ಕೆಲಸ ಮಾಡೋರಿಗೆ ಈ ವಿಡಿಯೋದಲ್ಲಿ ಹೇಳಿರೋ ಮಾತುಗಳು ಕೊಂಚ ಕಹಿ ಎನಿಸಬಹುದು.

ಆದ್ರೆ ಕೆಲಸದ ಹೊರತಾಗಿಯೂ ಜೀವನದಲ್ಲಿ ಕಲಿಯೋಕೆ ತುಂಬಾ ವಿಚಾರಗಳಿವೆ. ಉದ್ಯೋಗವಷ್ಟೆ ಬದುಕಿನ ಖುಷಿ ಅಲ್ಲ ಅನ್ನೋ ಸಂದೇಶವಿದೆ. ವಾಟ್ಸ್ ಯುವರ ಸ್ಟೇಟಸ್ ನ ಈ ಸಿರೀಸ್ ನ ಕೊನೆಯ ವಿಡಿಯೋ ಆಗಸ್ಟ್ 27 ರಂದು ಬಿಡುಗಡೆಯಾಗಲಿದೆ.

Half Day with subtitles

Office rants be like…Share it with everyone who has been a victim of the ‘Half Day’ comment from their colleagues and bosses!#UltraShorts #WhatsYourStatus #WYSNaveen Polishetty

Posted by Ultra Shorts on Tuesday, August 7, 2018

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...