alex Certify
ಕನ್ನಡ ದುನಿಯಾ       Mobile App
       

Kannada Duniya

ಡಬ್ಬದಲ್ಲಿ ಭ್ರೂಣ ತುಂಬಿ ಠಾಣೆಗೆ ತಂದ್ಲು ಮಹಿಳೆ…!

ಮಧ್ಯಪ್ರದೇಶದ ಶಿವನ್ ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಸಂಶಯ ಪಿಶಾಚಿ ಪತಿಯಿಂದ ಬೇಸತ್ತ ಮಹಿಳೆಯೊಬ್ಬಳು ಗರ್ಭಪಾತ ಮಾಡಿಸಿ ಭ್ರೂಣವನ್ನು ಪೊಲೀಸ್ ಠಾಣೆಗೆ ತಂದಿದ್ದಾಳೆ. ಶನಿವಾರ ಮಹಿಳೆ ಡಬ್ಬದಲ್ಲಿ ಎರಡು ತಿಂಗಳ ಭ್ರೂಣವನ್ನು ತಂದಿದ್ದಳು. ಆದ್ರೆ ದೂರು ದಾಖಲಿಸಲು ಪೊಲೀಸರು ನಿರಾಕರಿಸಿದ್ದರು.

ಎಎಸ್ಪಿ ಬಳಿ ದೂರು ದಾಖಲಿಸಿದ ನಂತ್ರ ಭ್ರೂಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಭ್ರೂಣದ ಡಿ ಎನ್ ಎ ಪರೀಕ್ಷೆ ಬಗ್ಗೆ ವೈದ್ಯರ ಸಲಹೆ ಪಡೆಯುವುದಾಗಿ ಪೊಲೀಸರು ತಿಳಿಸಿದ್ದಾರೆ. ಎಂಟು ತಿಂಗಳ ಹಿಂದೆ ರೀತು ಮದುವೆ ಪಂಕಜ್ ಎಂಬಾತನ ಜೊತೆ ನಡೆದಿತ್ತು. ಕೆಲ ತಿಂಗಳು ಜೊತೆಗಿದ್ದ ಪಂಕಜ್ ನಂತ್ರ ಪತ್ನಿಯನ್ನು ತವರಿಗೆ ಬಿಟ್ಟು ಹೋಗಿದ್ದ. ಪತ್ನಿಯನ್ನು ಸಂಶಯದಿಂದ ನೋಡುತ್ತಿದ್ದ ಪಂಕಜ್ ಆಕೆ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗು ನನ್ನದಲ್ಲ ಎಂದಿದ್ದ.

ಇದೇ ವಿಚಾರಕ್ಕೆ ಡಿಸೆಂಬರ್ 26ರಂದು ಎರಡೂ ಕುಟುಂಬದ ನಡುವೆ ಗಲಾಟೆ ನಡೆದಿದೆ.ಈ ವೇಳೆ ರೀತು ಹೊಟ್ಟೆಗೆ ಪೆಟ್ಟು ಬಿದ್ದಿದೆ. ರೀತುವನ್ನು ಆಸ್ಪತ್ರೆಗೆ ದಾಖಲಿಸಿ ಗರ್ಭಪಾತ ಮಾಡಲಾಗಿದೆ. ಭ್ರೂಣವನ್ನು ಡಬ್ಬದಲ್ಲಿ ತಂದಿರುವ ಮಹಿಳೆ ನನ್ನ ಮೇಲಿನ ಕಳಂಕ ಹೋಗಬೇಕು. ಸತ್ಯ ಹೊರ ಬರಬೇಕು. ಹಾಗಾಗಿ ಡಿ ಎನ್ ಎ ಪರೀಕ್ಷೆ ಮಾಡಿ ಎಂದಿದ್ದಾಳೆ.

ಭ್ರೂಣವನ್ನು ಹೊರಗೆ ತೆಗೆದು ತುಂಬಾ ದಿನವಾಗಿದ್ದರಿಂದ ಡಿ ಎನ್ ಎ ಪರೀಕ್ಷೆ ನಡೆಸಬಹುದಾ ಎಂಬುದು ಪೊಲೀಸರಿಗೆ ತಿಳಿದಿಲ್ಲ. ಈ ಬಗ್ಗೆ ವೈದ್ಯರ ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...