alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿದೆ ಡಿ.ಎಲ್. ಕುರಿತಾದ ಆತಂಕಕಾರಿ ಸುದ್ದಿ

dl

ನವದೆಹಲಿ: ಅಸಲಿಗೆ ಸೆಡ್ಡು ಹೊಡೆಯುವಂತಹ ನಕಲಿ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಹಿಂದಿನಿಂದಲೂ ಇವೆ. ಅದೇ ರೀತಿ ಡ್ರೈವಿಂಗ್ ಲೈಸೆನ್ಸ್ ಕೂಡ ನಕಲಿಯಾಗಿವೆ. ಎಂತೆಂಥ ದಾಖಲೆಗಳೇ ನಕಲಿಯಾಗುವಾಗ ಡಿ.ಎಲ್. ಯಾವ ವಿಷಯ ಎಂದುಕೊಂಡಿರಾ?

ದೇಶದಲ್ಲಿ ಶೇ.30 ರಷ್ಟು ಡ್ರೈವಿಂಗ್ ಲೈಸನ್ಸ್ ನಕಲಿಯಾಗಿವೆ. ಈ ಹಿನ್ನಲೆಯಲ್ಲಿ ಡಿ.ಎಲ್. ಗಳನ್ನು ಮರುಪರೀಕ್ಷೆಗೆ ಒಳಪಡಿಸಲು ತೀರ್ಮಾನಿಸಲಾಗಿದೆ. ದೇಶದಲ್ಲಿನ ಪ್ರತಿ 3 ಡಿ.ಎಲ್.ಗಳಲ್ಲಿ ಒಂದು ಡಿ.ಎಲ್. ನಕಲಿಯಾಗಿರುತ್ತದೆ. ಮೂಲಗಳ ಪ್ರಕಾರ 5 ಕೋಟಿ ಜನರ ಬಳಿ ನಕಲಿ ಡಿ.ಎಲ್.ಇದೆ ಎಂದು ಹೇಳಲಾಗಿದೆ. ಕೇಂದ್ರ ಸಾರಿಗೆ ಸಚಿವಾಲಯ ನಕಲಿ ಚಾಲನಾ ಪರವಾನಿಗೆ ಪತ್ರಗಳಿಗೆ ಕಡಿವಾಣ ಹಾಕಲು ಮುಂದಾಗಿದೆ.

ರಸ್ತೆ ಸುರಕ್ಷತೆಗೆ ಹೊಸ ನಿಯಮಾವಳಿ ರೂಪಿಸಲು ಮುಂದಾಗಿರುವ ಕೇಂದ್ರ ಸರ್ಕಾರ, ಈಗಾಗಲೇ ಅಗತ್ಯ ಕ್ರಮ ಕೈಗೊಂಡಿದೆ. ಅದರಂತೆ ನಕಲಿ ಡಿ.ಎಲ್. ಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮತ್ತೊಮ್ಮೆ ಪರಿಶೀಲನೆ ನಡೆಸಲಾಗುವುದೆಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...