alex Certify
ಕನ್ನಡ ದುನಿಯಾ       Mobile App
       

Kannada Duniya

ಮುನಿಸಿಕೊಂಡ ಡಿಕೆಶಿ ಮನವೊಲಿಕೆಗೆ ಕೇಂದ್ರದಿಂದ ಬಂದ್ರು ಇಬ್ಬರು ನಾಯಕರು

ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ರಚನೆಯಾಗಿದೆ. ಕಾಂಗ್ರೆಸ್-ಜೆಡಿಎಸ್ ಒಂದಾಗಿ ಸರ್ಕಾರ ರಚನೆ ಮಾಡಿದೆ. ಮೈತ್ರಿ ಸರ್ಕಾರದಲ್ಲಿ ಬಹುಮುಖ್ಯ ಪಾತ್ರ ವಹಿಸಿದವರು ಮಾಜಿ ಸಚಿವ ಡಿ.ಕೆ. ಶಿವಕುಮಾರ್. ಆಪರೇಷನ್ ಕಮಲಕ್ಕೆ ಕೈ-ಜೆಡಿಎಸ್ ಶಾಸಕರು ಸಿಲುಕದಂತೆ ನೋಡಿಕೊಂಡು, ಶಾಸಕರನ್ನು ಚಾಣಾಕ್ಷತನದಿಂದ ರಕ್ಷಿಸಿದ ಹೊಣೆ ಡಿಕೆಶಿಗೆ ಸೇರುತ್ತದೆ.

ಶಾಸಕರನ್ನು ಒಂದಾದ ಮೇಲೆ ಒಂದು ಹೊಟೇಲ್, ರೆಸಾರ್ಟ್ ಗಳಿಗೆ ಶಿಫ್ಟ್ ಮಾಡಿ ಅವ್ರನ್ನು ಕಣ್ಣಲ್ಲಿ ಕಣ್ಣಿಟ್ಟು ಕಾದ ಡಿ.ಕೆ. ಶಿವಕುಮಾರ್ ಈಗ ಮುನಿಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಬೆಂಗಳೂರಿಗೆ ಬಂದಾಗ, ಸೂಕ್ತ ಗೌರವ ನನಗೆ ಸಿಕ್ಕಿಲ್ಲ ಎಂಬ ದೂರನ್ನು ಡಿಕೆಶಿ ನೀಡಿದ್ದರಂತೆ.

ಉಪಮುಖ್ಯಮಂತ್ರಿ ರೇಸ್ ನಲ್ಲಿ ಮೊದಲ ಸ್ಥಾನದಲ್ಲಿದ್ದ ಡಿಕೆಶಿಗೆ ಡಿಸಿಎಂ ಹುದ್ದೆ ಸಿಗಲಿಲ್ಲ. ಡಿಸಿಎಂ ಸ್ಥಾನ ಪರಮೇಶ್ವರ್ ಪಾಲಾಗಿದೆ. ಕುಮಾರಸ್ವಾಮಿ ಹಾಗೂ ಡಿಕೆಶಿ ಒಂದೇ ಸಮುದಾಯಕ್ಕೆ ಬರೋದ್ರಿಂದ ಎಂದೂ ಒಂದೇ ಜಾತಿಯವರಿಗೆ ಸಿಎಂ, ಡಿಸಿಎಂ ಹುದ್ದೆ ನೀಡುವ ತಪ್ಪನ್ನು ಕಾಂಗ್ರೆಸ್ ಮಾಡುವುದಿಲ್ಲ.

ಸಚಿವ ಸಂಪುಟ ರಚನೆ ಇನ್ನೂ ಆಗಿಲ್ಲ. ಎರಡು ದೊಡ್ಡ ಸಚಿವ ಸ್ಥಾನದ ಮೇಲೆ ಡಿಕೆಶಿ ಕಣ್ಣಿದೆ. ಅದಕ್ಕಾಗಿ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗ್ತಿದೆ. ಡಿಕೆಶಿ ಮುನಿಸಿನ ವಿಚಾರ ರಾಹುಲ್ ಕಿವಿಗೆ ತಲುಪಿದೆ. ಹಾಗಾಗಿಯೇ ಗುಲಾಂ ನಬಿ ಆಜಾದ್ ಹಾಗೂ ಅಶೋಕ್ ಗೆಹ್ಲೋಟ್ ಅವ್ರನ್ನು ಡಿಕೆಶಿ ಸಂಧಾನಕ್ಕಾಗಿ ರಾಹುಲ್ ಕಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...