alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಎಂ ಯೋಗಿಗೆ ವಿಶೇಷವಾಗಿರಲಿದೆ ಈ ಬಾರಿಯ ದೀಪಾವಳಿ

ಭಗವಂತ ರಾಮನ ನಗರ ಅಯೋಧ್ಯೆಯಲ್ಲಿ ಈ ಬಾರಿ ದೀಪಾವಳಿಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ದೀಪಾವಳಿ ಶುಭ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ಸಾವಿರಾರು ದೀಪಗಳು ಬೆಳಗಲಿವೆ. ಅಯೋಧ್ಯೆಯಲ್ಲಿ 4, 5 ಮತ್ತು 6ರಂದು ವಿರಾಟ್ ದೀಪೋತ್ಸವ ಕಾರ್ಯಕ್ರಮ ನಡೆಯಲಿದೆ.

ನವೆಂಬರ್ 6 ರಂದು ಅಯೋಧ್ಯೆಯಲ್ಲಿ ಮೂರು ಲಕ್ಷ  ದೀಪ ಬೆಳಗಿ ದಾಖಲೆ ನಿರ್ಮಾಣ ಮಾಡಲಿದ್ದಾರೆ. ಇದೇ ವೇಳೆ ಎಲ್ಲ ದೇವಸ್ಥಾನಗಳಲ್ಲಿ ಮತ್ತು ಮಠಗಳಲ್ಲಿ ದೀಪ ಹಚ್ಚಲಾಗುವುದು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನವೆಂಬರ್ 6ರಂದು 16 ಅಡಿ ಎತ್ತರದ ದೀಪ ಬೆಳಗಲಿದ್ದಾರೆ. ಈ ಕಾರ್ಯಕ್ರಮಕ್ಕೆ ದೇಶ-ವಿದೇಶಗಳಿಂದ ಜನರು ಬರಲಿದ್ದಾರೆ.

ಅಯೋಧ್ಯೆಯಲ್ಲಿ ಇದೇ ಮೊದಲ ಬಾರಿ ರಷ್ಯಾದ ಕಲಾವಿದರು ರಾಮ ಲೀಲೆಯನ್ನು ವರ್ಣಿಸಲಿದ್ದಾರೆ. ಅಯೋಧ್ಯೆ ಜನರು 3 ಲಕ್ಷ ದೀಪ ಬೆಳಗಿ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಸೇರಲಿದ್ದಾರೆ. ರಾಮ್ ಲೀಲಾ ಮೈದಾನದಲ್ಲಿ ಎರಡು ರಾಜ್ಯಗಳ ಕಲಾವಿದರ ಜೊತೆ ಆರು ರಾಷ್ಟ್ರಗಳ ಕಲಾವಿದರು ಪಾಲ್ಗೊಳ್ಳಲಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...