alex Certify
ಕನ್ನಡ ದುನಿಯಾ       Mobile App
       

Kannada Duniya

ಗಂಡಂದಿರ ವಾಟ್ಸಾಪ್ ಮೆಸೇಜ್ ಗೆ ಪತ್ನಿಯರು ಶಾಕ್..!

hyder

ಹೈದರಾಬಾದ್: ಸಾಮಾಜಿಕ ಜಾಲತಾಣಗಳ ಮೂಲಕ, ತಲಾಖ್ ನೀಡುತ್ತಿರುವ ಅನೇಕ ಪ್ರಕರಣಗಳು ಇತ್ತೀಚೆಗೆ ವರದಿಯಾಗಿದೆ.

ಅಮೆರಿಕದಲ್ಲಿರುವ ತಮ್ಮ ಗಂಡಂದಿರು ಕಳುಹಿಸಿದ್ದ ವಾಟ್ಸಾಪ್ ಮೆಸೇಜ್ ಕಂಡು, ಹೈದರಾಬಾದ್ ನಲ್ಲಿರುವ ಅವರ ಪತ್ನಿಯರು ಶಾಕ್ ಆಗಿದ್ದಾರೆ.

ಅಣ್ಣ ಉಸ್ಮಾನ್ ಖುರೇಶಿ 2013 ರಲ್ಲಿ ಬೆಹರಿನ್ ಅವರನ್ನು ವಿವಾಹವಾಗಿದ್ದರು. ಅವರ ಸಹೋದರ ಸೈಯದ್ ಫಯಾಜ್ 2015 ರಲ್ಲಿ ಹೀನಾ ಫಾತಿಮಾರನ್ನು ಮದುವೆಯಾಗಿದ್ದಾರೆ.

ಉಸ್ಮಾನ್ ಮತ್ತು ಫಯಾಜ್ ಅಮೆರಿಕದಲ್ಲಿ ಉದ್ಯೋಗದಲ್ಲಿದ್ದಾರೆ. ಇಬ್ಬರೂ ತಮ್ಮ ಪತ್ನಿಯರಿಗೆ ವಾಟ್ಸಾಪ್ ನಲ್ಲಿ ತಲಾಖ್ ಸಂದೇಶ ಕಳುಹಿಸಿದ್ದಾರೆ.

ಬೆಹರಿನ್ ಮತ್ತು ಫಾತಿಮಾ ಅವರನ್ನು ಅವರ ಮಾವ ಮನೆಯಿಂದ ಹೊರ ಹಾಕಿದ್ದು, ಕಂಗಾಲಾದ ಮಹಿಳೆಯರು ಮನೆಯ ಎದುರಿನಲ್ಲೇ ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು, ಮಾವ, ಅತ್ತೆಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...