alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಲಿಯ ಮದುವೆಯಲ್ಲಿ ಸಂಭ್ರಮಿಸಿದ ಜಿಲ್ಲಾಧಿಕಾರಿ

ಬಹುತೇಕ ಸಂದರ್ಭಗಳಲ್ಲಿ ಕೆಲಸಗಾರರು ತಮ್ಮ ಮೇಲಾಧಿಕಾರಿಗಳನ್ನು ಮನೆಯ ಶುಭ ಸಮಾರಂಭಕ್ಕೆ ಆಹ್ವಾನಿಸಿದ ವೇಳೆ ದೂರದಿಂದಲೇ ಒಂದು ಶುಭಾಶಯ ಕಳಿಸಿ ಸುಮ್ಮನಾಗುವವರೇ ಹೆಚ್ಚು.

ಅದರಲ್ಲೂ ಉನ್ನತ ಹುದ್ದೆ ಹೊಂದಿರುವವರು ಸಾಮಾನ್ಯ ನೌಕರರ ಕಷ್ಟ-ಸುಖಗಳಿಗೆ ಸ್ಪಂದಿಸುವುದೇ ಇಲ್ಲ. ಆದರೆ ತೆಲಂಗಾಣದ ಆದಿಲಾಬಾದ್ ಜಿಲ್ಲೆಯ ಜಿಲ್ಲಾಧಿಕಾರಿ ದಿವ್ಯಾ ದೇವರಾಜನ್ ಈ ಸಾಮಾನ್ಯ ನಂಬಿಕೆಗೆ ವ್ಯತಿರಿಕ್ತವಾಗಿರುವವರು.

ಅದಕ್ಕೆ ಉದಾಹರಣೆಯಾಗಿದ್ದು, ಜಿಲ್ಲಾಧಿಕಾರಿ ದಿವ್ಯಾ ದೇವರಾಜನ್ ಅವರ ನಿವಾಸದ ಗಾರ್ಡನ್ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಮಾಲಿಯ ವಿವಾಹ ಸಮಾರಂಭ. ಗುಡಿಹಾತ್ನೂರು ಬ್ಲಾಕ್ ನ ಗೋಪಾಲಪುರ ಗ್ರಾಮದಲ್ಲಿ ಆದಿವಾಸಿ ಜನಾಂಗಕ್ಕೆ ಸೇರಿದ ಸುಧಾಕರ್ ವಿವಾಹ ಸಮಾರಂಭ ಶುಕ್ರವಾರ ಏರ್ಪಾಟಾಗಿತ್ತು.

ಸಹಜವಾಗಿಯೇ ಸುಧಾಕರನ್, ದಿವ್ಯಾ ದೇವರಾಜನ್ ರನ್ನು ತನ್ನ ವಿವಾಹ ಸಮಾರಂಭಕ್ಕೆ ಆಹ್ವಾನಿಸಿದ್ದ. ಆದರೆ ಅವರು ಆಗಮಿಸುವ ಯಾವುದೇ ನಿರೀಕ್ಷೆ ಆತನಲ್ಲಿರಲಿಲ್ಲ. ಆದರೆ ದಿವ್ಯಾ ದೇವರಾಜನ್ ಈ ವಿವಾಹ ಸಮಾರಂಭಕ್ಕೆ ಹಾಜರಾಗಿದ್ದು ಮಾತ್ರವಲ್ಲ, ತಮಗೆ ಕೂರಲು ಚೇರ್ ನೀಡಿದರೂ ಅದನ್ನು ನಿರಾಕರಿಸಿ ಶ್ರೀಸಾಮಾನ್ಯರಂತೆ ಎಲ್ಲರ ಜೊತೆ ನೆಲದ ಮೇಲೆ ಕುಳಿತಿದ್ದಾರೆ. ಅಷ್ಟೇ ಅಲ್ಲ ಆದಿವಾಸಿ ಸಂಪ್ರದಾಯದ ಗೀತೆಗೆ ದಿವ್ಯಾ ದೇವರಾಜನ್ ಹೆಜ್ಜೆಯನ್ನೂ ಹಾಕಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...