alex Certify
ಕನ್ನಡ ದುನಿಯಾ       Mobile App
       

Kannada Duniya

ಸರ್ಟಿಫಿಕೇಟ್ ಗಾಗಿ ಗಂಡನನ್ನೇ ಬೆನ್ನ ಮೇಲೆ ಹೊತ್ತೊಯ್ದ ಮಹಿಳೆ

ಸರ್ಕಾರದಿಂದ ನೀಡಲಾಗುವ ಪರಿಹಾರವನ್ನು ಪಡೆದುಕೊಳ್ಳಲು ಕೆಲವೊಮ್ಮೆ ಫಲಾನುಭವಿಗಳ ಸಾಕಷ್ಟು ಪರದಾಡಬೇಕಾಗುತ್ತದೆ. ಇದು ವಿಕಲಾಂಗರ ಮಟ್ಟಿಗೂ ನಿಜ. ಎಷ್ಟರ ಮಟ್ಟಿಗೆ ಎಂದರೆ ಸರ್ಟಿಫಿಕೇಟ್ ಪಡೆದುಕೊಳ್ಳಲು ಮಹಿಳೆಯೊಬ್ಬಳು ತನ್ನ ವಿಕಲಾಂಗ ಗಂಡನನ್ನು ಬೆನ್ನ ಮೇಲೆ ಹೊತ್ತೊಯ್ದ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದೆ.

ಬೀಮಲಾಲಾ ಎಂಬಾಕೆಯ ಗಂಡ ಲಾರಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದು, ಅಪಘಾತವೊಂದರಲ್ಲಿ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದಾನೆ. ವಿಕಲಾಂಗ ಸರ್ಟಿಫಿಕೇಟ್ ಮಾಡಿಸಲು ಈತನ ಕುಟುಂಬ ಸಾಕಷ್ಟು ಬಾರಿ ಕಚೇರಿಗಳಿಗೆ ಅಲೆದಾಡಿದೆ.

ಕೊನೆಯದಾಗಿ ಮುಖ್ಯ ಆರೋಗ್ಯಾಧಿಕಾರಿ ಕಚೇರಿಯಲ್ಲಿ ಆತನ ಫೋಟೋವನ್ನು ಕೇಳಲಾಗಿದ್ದು, ಬೇರೆ ಮಾರ್ಗವಿಲ್ಲದೇ ಆಕೆ ತನ್ನ ಗಂಡನನ್ನು ಬೆನ್ನ ಮೇಲೆ ಹೊತ್ತೊಯ್ದಿದ್ದಾಳೆ. ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆಯೇ ಉತ್ತರ ಪ್ರದೇಶ ಸರ್ಕಾರ, ಆಕೆಯ ವಿಕಲಾಂಗ ಪತಿಗೆ ಮೂರು ಗಾಲಿಯ ಸೈಕಲ್ ಸೇರಿದಂತೆ ಅಗತ್ಯವಿರುವ ಎಲ್ಲಾ ಸಹಾಯ ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...