alex Certify
ಕನ್ನಡ ದುನಿಯಾ       Mobile App
       

Kannada Duniya

ಸನ್ಯಾಸಿ ಮಗನ ವಿರುದ್ಧ ಕೋರ್ಟ್ ಮೊರೆ ಹೋದ ದಿವ್ಯಾಂಗ ಪಾಲಕರು

ಗುಜರಾತಿನ ಅಹಮದಾಬಾದ್ ನಲ್ಲಿ ದಿವ್ಯಾಂಗ ದಂಪತಿ ಮಗನ ವಿರುದ್ಧ ಅರ್ಜಿ ಸಲ್ಲಿಸಿದ್ದಾರೆ. ಹೊಟ್ಟೆ ತುಂಬಿಸಿಕೊಳ್ಳಲು ಆರ್ಥಿಕ ಸಹಾಯ ಮಾಡುವಂತೆ ಬೇಡಿಕೆಯಿಟ್ಟಿದ್ದಾರೆ. ಕಾನೂನು ಸೇವಾ ಪ್ರಾಧಿಕಾರದಡಿ 64 ವರ್ಷದ ಲೀಲಾಭಾಯ್ ಮತ್ತು ಅವ್ರ ಪತ್ನಿ, ಮಗ ಧರ್ಮೇಶ್ ವಿರುದ್ಧ ಅರ್ಜಿ ಸಲ್ಲಿಸಿದ್ದಾರೆ. ಮಗ ಧರ್ಮೇಶ್ ನಿಂದ ಆರ್ಥಿಕ ಸಹಾಯ ಕೊಡಿಸುವಂತೆ ಕೋರಿದ್ದಾರೆ.

ಬೇರೆಯವರ ಮಾತು ಕೇಳಿ ಮಗ ಸಾಧುವಾಗಿದ್ದಾನೆ. ಕುಟುಂಬದಿಂದ ದೂರ ವಾಸವಾಗಿದ್ದಾನೆ. ಇದ್ರಿಂದ ದಿವ್ಯಾಂಗ ಪಾಲಕರು ತೊಂದರೆ ಅನುಭವಿಸುವಂತಾಗಿದೆ. ಲೀಲಾಭಾಯ್ ಸರ್ಕಾರಿ ಕೆಲಸದಿಂದ ನಿವೃತ್ತಿ ಹೊಂದಿದ್ದಾರೆ. 27 ವರ್ಷದ ಮಗ ಧರ್ಮೇಶನನ್ನು 20 ಲಕ್ಷ ರೂಪಾಯಿ ಖರ್ಚು ಮಾಡಿ ಓದಿಸಿದ್ದಾರಂತೆ. ಧರ್ಮೇಶ್ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡ್ತಿದ್ದನಂತೆ. ಆದ್ರೆ ಬೇರೆಯವರ ಮಾತು ಕೇಳಿ ಈಗ ಸನ್ಯಾಸಿಯಾಗಿದ್ದಾನಂತೆ.

ಎಷ್ಟು ಪ್ರಯತ್ನಪಟ್ಟರೂ ಧರ್ಮೇಶ್ ಮನೆಗೆ ಬರಲಿಲ್ಲವಂತೆ. ಮನೆಯಲ್ಲಿ ದುಡಿಯುವ ಕೈ ಇಲ್ಲದ ಕಾರಣ ಕುಟುಂಬ ನಿರ್ವಹಣೆ ಕಷ್ಟವಾಗಿದೆ ಎಂದು ಲೀಲಾಭಾಯ್ ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...