alex Certify
ಕನ್ನಡ ದುನಿಯಾ       Mobile App
       

Kannada Duniya

ವಿಚ್ಛೇದಿತ ಪತ್ನಿಗೆ ಪರಿಹಾರ ನೀಡಲು ನೆರವು ಕೇಳ್ತಿದ್ದಾನೆ ಈತ

ಅಪಘಾತವೊಂದು 43 ವರ್ಷದ ಶಿವಕುಮಾರ್ ಬದುಕನ್ನೇ ಅಲ್ಲೋಲಕಲ್ಲೋಲ ಮಾಡಿಬಿಟ್ಟಿದೆ. ದಿನಪತ್ರಿಕೆ ಡಿಸ್ಟ್ರಿಬ್ಯೂಟರ್ ಆಗಿದ್ದ ಶಿವಕುಮಾರ್ ಈಗ ವಿಕಲ ಚೇತನ. ಬಸ್ ಅಪಘಾತವೊಂದರಲ್ಲಿ ಗಾಯಗೊಂಡು ಹಾಸಿಗೆ ಹಿಡಿದಿದ್ದಾನೆ ಶಿವಕುಮಾರ್.

ಮದುವೆಯಾಗಿ 8 ತಿಂಗಳುಗಳ ಬಳಿಕ ಈ ಅಪಘಾತ ಸಂಭವಿಸಿತ್ತು. ಹಾಸಿಗೆ ಹಿಡಿದಿದ್ದ ಶಿವಕುಮಾರ್ ನ ತಂದೆ ಹಾಗೂ ತಾಯಿಯನ್ನು ನೋಡಿಕೊಳ್ಳುವುದು ಮೊದಲಿನಿಂದ್ಲೂ ಆತನ ಪತ್ನಿಗೆ ಇಷ್ಟವಿರಲಿಲ್ಲ. ಅಪಘಾತದ ಬಳಿಕ ಶಿವಕುಮಾರ್ ಬದುಕುವುದೇ ಅನುಮಾನವಾಗಿತ್ತು.

ಆಗಲೇ ಪತ್ನಿ ಅವನನ್ನು ತೊರೆದು ಹೋಗಿಬಿಟ್ಟಿದ್ದಾಳೆ. ಅಷ್ಟಕ್ಕೇ ಸುಮ್ಮನಾಗದೆ ಶಿವಕುಮಾರ್ ಮತ್ತವನ ಕುಟುಂಬದ ವಿರುದ್ಧ ವರದಕ್ಷಿಣೆ ಕೇಸ್ ಹಾಕಿದ್ದಾಳೆ. ಇತ್ತ ಕ್ಯಾನ್ಸರ್ ಇದೆಯೆಂಬ ತಪ್ಪು ಗ್ರಹಿಕೆಯಿಂದ ವೈದ್ಯರು ಶಿವಕುಮಾರ್ ಗೆ ಚಿಕಿತ್ಸೆ ನೀಡಿದ್ದರಿಂದ ಆತ ಪಾರ್ಶ್ವವಾಯುವಿಗೆ  ತುತ್ತಾದ.

ಈಗ ಮಾಜಿ ಪತ್ನಿಗೆ ಆತ ಪ್ರತಿತಿಂಗಳು 4 ಸಾವಿರ ರೂಪಾಯಿ ಪರಿಹಾರ ಕೊಡಬೇಕು. ಆದ್ರೆ ವಿಕಲಚೇತನನಾಗಿರೋದ್ರಿಂದ ಕೆಲಸ ಮಾಡಲು ಸಾಧ್ಯವಾಗ್ತಿಲ್ಲ. ಹಣ ಕೊಟ್ಟಿಲ್ಲ ಅನ್ನೋ ಕಾರಣಕ್ಕೆ ಮೂರು ಬಾರಿ ಅವನನ್ನು ತಿಹಾರ್ ಜೈಲಿಗೆ ಹಾಕಲಾಗಿತ್ತು.

ಪತ್ನಿಗೆ ಹಣ ಕಳಿಸಲೇಬೇಕಾದ ಅನಿವಾರ್ಯತೆ. ಇಷ್ಟದಿನ ಸ್ನೇಹಿತರಿಂದ ಶಿವಕುಮಾರ್ ಸಾಲ ಸೋಲ ಮಾಡುತ್ತಿದ್ದ. ಈಗ ಕ್ರೌಡ್ ಫಂಡಿಂಗ್ ಮೂಲಕ ಹಣ ಸಂಗ್ರಹಿಸುತ್ತಿದ್ದಾನೆ. ದಾನಿಗಳಿಂದ ನೆರವು ಕೇಳ್ತಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...