alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಸ ತಿರುವು ಪಡೆದ ಯುವತಿ ಕಿಡ್ನಾಪ್ ಪ್ರಕರಣ

deepti-sarna-pti

ಘಾಜಿಯಾಬಾದ್: ಸ್ನಾಪ್ ಡೀಲ್ ಕಛೇರಿ ಉದ್ಯೋಗಿ 24 ವರ್ಷ ದೀಪ್ತಿ ಸರ್ನಾ ಅಪಹರಣ ಪ್ರಕರಣವನ್ನು ಬೇಧಿಸಲು ಪೊಲೀಸರು ಯಶಸ್ವಿಯಾಗಿದ್ದು, ಆಕೆಯನ್ನು ಪ್ರೀತಿಸುತ್ತಿದ್ದ ಯುವಕನೇ ಅಪಹರಣದ ಸೂತ್ರಧಾರ ಎಂಬ ಮಾಹಿತಿ ಬಹಿರಂಗವಾಗಿದೆ.

ಪ್ರಕರಣ ಸಂಬಂಧ ಈಗಾಗಲೇ ಐವರನ್ನು ಬಂಧಿಸಲಾಗಿದ್ದು, ಬಂಧಿತರಲ್ಲಿ ಒಬ್ಬನಾಗಿರುವ ದೇವೇಂದರ್ ಎಂಬಾತನೇ ಇಡಿ ಪ್ರಕರಣದ ರೂವಾರಿ ಎಂಬುದು ಬೆಳಕಿಗೆ ಬಂದಿದೆ.

ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ದೀಪ್ತಿ ಸರ್ನಾಳನ್ನು ವೈಶಾಲಿಯ ಮೆಟ್ರೋ ಸ್ಟೇಷನ್ ಬಳಿಯಿಂದ ಅಪಹರಿಸಲಾಗಿತ್ತು. ಬಳಿಕ ಶುಕ್ರವಾರದಂದು ಆಕೆಯನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಲಾಗಿತ್ತಲ್ಲದೇ ಅಪಹರಣದ ವೇಳೆ ಆಕೆ ಬಯಸಿದ ಆಹಾರವನ್ನೇ ನೀಡಲಾಗಿತ್ತು. ಜೊತೆಗೆ ರೈಲಿನಲ್ಲಿ ತೆರಳಲು ಹಣವನ್ನೂ ಅಪಹರಣಕಾರರು ನೀಡಿದ್ದರು.

ಇದೆಲ್ಲದರಿಂದ ಅಪಹರಣ ಪ್ರಕರಣದಲ್ಲಿ ಆಕೆಯ ಚಲನವಲನ ಗೊತ್ತಿದ್ದವರೇ ಭಾಗಿಯಾಗಿರಬಹುದೆಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದರು. ಬಿಡುಗಡೆಗೊಂಡ ಬಂದ ಬಳಿಕ ದೀಪ್ತಿ ಸರ್ನಾ ಬಳಲಿದಂತೆ ಕಂಡಿದ್ದರಿಂದ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಲು ಮುಂದಾಗಿರಲಿಲ್ಲ. ಇದೀಗ ಅಪಹರಣ ಪ್ರಕರಣದ ಸೂತ್ರಧಾರಿ ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ದೇವೇಂದರ್, ಪ್ರೀತಿ ಏಕಮುಖವಾಗಿತ್ತೆಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...