alex Certify
ಕನ್ನಡ ದುನಿಯಾ       Mobile App
       

Kannada Duniya

ಅವಳಿ ಸ್ಪೋಟ: 6 ಮಂದಿ ವಿರುದ್ದದ ಆರೋಪ ಸಾಬೀತು

dilsukhnagar-twin-blasts-verdict2013 ರ ಫೆಬ್ರವರಿ 21 ರಂದು ಹೈದರಾಬಾದಿನ ದಿಲ್ ಸುಖ್ ನಗರದಲ್ಲಿ ಸಂಭವಿಸಿದ್ದ ಅವಳಿ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ಎನ್ಐಎ ವಿಶೇಷ ನ್ಯಾಯಾಲಯ ಸ್ಪೋಟ ನಡೆಸಿದ್ದ ಪ್ರಕರಣದಲ್ಲಿ ಪಾಲ್ಗೊಂಡಿದ್ದ ಆರು ಮಂದಿ ಅಪರಾಧಿಗಳೆಂದು ತೀರ್ಪು ನೀಡಿದ್ದು, ಡಿಸೆಂಬರ್ 19 ಕ್ಕೆ ಶಿಕ್ಷೆ ಪ್ರಮಾಣ ಪ್ರಕಟಿಸುವುದಾಗಿ ತಿಳಿಸಿದೆ.

ಇಂಡಿಯನ್ ಮುಜಾಹಿದ್ದೀನ್ ಸಂಘಟನೆಗೆ ಸೇರಿದ ಅಸುದುಲ್ಲಾ ಅಖ್ತರ್, ಮೊಹಮ್ಮದ್ ಅಹ್ಮದ್ ಸಿದ್ದಿಬಾಪಾ ಅಲಿಯಾಸ್ ಯಾಸಿನ್ ಭಟ್ಕಳ್, ಜಿಯಾ ಉರ್ ರೆಹಮಾನ್, ತಹ್ಸೀನ್ ಅಖ್ತರ್, ರಿಯಾಜ್ ಭಟ್ಕಳ್ ಹಾಗೂ ಎಜಾಜ್ ಶೇಕ್ ಅವರುಗಳ ವಿರುದ್ದದ ಆರೋಪ ದೃಢಪಟ್ಟ ಹಿನ್ನಲೆಯಲ್ಲಿ ವಿಶೇಷ ನ್ಯಾಯಾಲಯ ಈ ತೀರ್ಪು ನೀಡಿದೆ. ರಿಯಾಜ್ ಭಟ್ಕಳ್ ಇನ್ನೂ ನಾಪತ್ತೆಯಾಗಿದ್ದು, ಉಳಿದ 5 ಮಂದಿ ಈಗಾಗಲೇ ಜೈಲಿನಲ್ಲಿದ್ದಾರೆ.

2013 ರ ಫೆಬ್ರವರಿ 21 ರಂದು ದಿಲ್ ಸುಖ್ ನಗರದ ಬಸ್ ಸ್ಟ್ಯಾಂಡ್ ಬಳಿ ಮೊದಲ ಸ್ಪೋಟ ಸಂಭವಿಸಿದ್ದು ,ಕೆಲ ಸೆಕೆಂಡುಗಳ ಅಂತರದಲ್ಲಿ ಮಿರ್ಚಿ ಸೆಂಟರ್ ಬಳಿ ಮತ್ತೊಂದು ಬಾಂಬ್ ಸ್ಪೋಟಿಸಿತ್ತು. ಈ ಸ್ಪೋಟದಿಂದ 19 ಮಂದಿ ಸಾವನ್ನಪ್ಪಿ 131 ಮಂದಿ ಗಾಯಗೊಂಡಿದ್ದರು. ಪ್ರಕರಣದ ತನಿಖೆ ನಡೆಸಿದ್ದ ರಾಷ್ಟ್ರೀಯ ತನಿಖಾ ತಂಡ ಆರು ಮಂದಿಯನ್ನು ಬಂಧಿಸಿ ವಿಶೇಷ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ಸಲ್ಲಿಸಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...