alex Certify
ಕನ್ನಡ ದುನಿಯಾ       Mobile App
       

Kannada Duniya

ಚುನಾವಣಾ ಪ್ರಚಾರಕ್ಕೆ ಹೋಗದಿರುವುದರ ರಹಸ್ಯ ಬಿಚ್ಚಿಟ್ಟ ಕಾಂಗ್ರೆಸ್ ನಾಯಕ

ಭೋಪಾಲ್: ಕಾಂಗ್ರೆಸ್ ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಯಾಕೆ ಮಧ್ಯಪ್ರದೇಶದಲ್ಲಿ ಚುನಾವಣಾ ಪ್ರಚಾರಕ್ಕೆ ಹೋಗ್ತಾ ಇಲ್ಲ? ಇದಕ್ಕೆ ಅವರ ಬಾಯಿಂದಲೇ ಹೇಳಿರುವ ಉತ್ತರವಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಮಾತ್ರವಲ್ಲ ಬಿಜೆಪಿಗೆ ಕಾಂಗ್ರೆಸ್ ಟೀಕಿಸಲು ಪ್ರಬಲ ಅಸ್ತ್ರ ಸಿಕ್ಕಂತಾಗಿದೆ.

ಆ ವೀಡಿಯೋದಲ್ಲಿ ಇರುವುದಿಷ್ಟು:

“ನನ್ನ ಕೆಲಸವೊಂದೇ. ಯಾವುದೇ ಪ್ರಚಾರಕ್ಕೆ ಹೋಗುವುದಿಲ್ಲ, ಯಾವುದೇ ಭಾಷಣ ಮಾಡುವುದಿಲ್ಲ. ನಾನು ಭಾಷಣದಿಂದಲೇ ಕಾಂಗ್ರೆಸ್ ಗೆ ಬೀಳುವ ಮತಗಳು ಕಡಿಮೆಯಾಗಿವೆ. ಹೀಗಾಗಿ ಎಲ್ಲಿಗೂ ಹೋಗಲಾರೆ’’ ಹೀಗೆಂದು ಭೋಪಾಲ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬಳಿ ಹೇಳುತ್ತಿರುವ ವಿಡಿಯೋ ವೈರಲ್ ಆಗಿದೆ.

ಇದೀಗ ಬಿಜೆಪಿಗೆ ಟೀಕಾ ಪ್ರಹಾರ ನಡೆಸಲು ಅಸ್ತ್ರ ಸಿಕ್ಕಿದ್ದು, ಇದು ಕಾಂಗ್ರೆಸ್ ಪಕ್ಷ ಹಿರಿಯ ನಾಯಕರನ್ನು ನಡೆಸಿಕೊಳ್ಳುವ ರೀತಿ ಎಂದು ವ್ಯಂಗ್ಯವಾಡಿದೆ. ಅವರೆಲ್ಲೂ ಪ್ರಚಾರಕ್ಕೆ ಬರುತ್ತಿಲ್ಲ, ಯಾವ ಪೋಸ್ಟರ್ ನಲ್ಲೂ ಅವರ ಫೋಟೋಗಳಿಲ್ಲ. ಕಾಂಗ್ರೆಸ್ ನ ಹಿರಿಯ ನಾಯಕನಿಗೆ ನೋವು ಕೊಟ್ಟಿದ್ದು ನಾವಲ್ಲ, ಸ್ವತಃ ಕಾಂಗ್ರೆಸ್ ಎಂದು ಹೇಳಿದೆ.

ಆದರೆ ದಿಗ್ವಿಜಯ್ ಸಿಂಗ್ ಮಾತ್ರ ತನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ಹೇಳಿದ್ದಾರೆ. ನಾನು ಕಾರ್ಯಕರ್ತರೊಂದಿಗೆ ಮಾತನಾಡಿದ ಮೊದಲ ಭಾಗದ ವಿಡಿಯೋ ನೋಡಿದರೆ ವಾಸ್ತವದ ಅರಿವಾಗುತ್ತದೆ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...