alex Certify
ಕನ್ನಡ ದುನಿಯಾ       Mobile App
       

Kannada Duniya

ರಾಷ್ಟ್ರಗೀತೆ ಪ್ರಸಾರದ ವೇಳೆ ಎದ್ದು ನಿಲ್ಲದ ವಿಕಲಚೇತನನಿಗೆ ನಿಂದನೆ

ಮಲ್ಟಿಪ್ಲೆಕ್ಸ್ ಒಂದರಲ್ಲಿ ರಾಷ್ಟ್ರಗೀತೆ ಪ್ರಸಾರದ ವೇಳೆ ಎದ್ದು ನಿಂತು ಗೌರವ ಸೂಚಿಸಿಲ್ಲ ಅಂತಾ ವಿಕಲಚೇತನನಿಗೆ ಪಾಕಿಸ್ತಾನಿ ಅಂತಾ ನಿಂದಿಸಿರುವ ಘಟನೆ ಗುವಾಹಟಿಯಲ್ಲಿ ನಡೆದಿದೆ.

ಅರ್ಮಾನ್ ಅಲಿ ಎನ್ ಜಿ ಓ ಒಂದರ ನಿರ್ದೇಶಕ. ವ್ಹೀಲ್ ಚೇರ್ ಆಸರೆ ಪಡೆದಿದ್ದಾರೆ. ಎದ್ದು ನಿಲ್ಲಲು ಅವರಿಂದ ಸಾಧ್ಯವಿಲ್ಲ. ಹಾಗಾಗಿ ಕುಳಿತಲ್ಲೇ ರಾಷ್ಟ್ರಗೀತೆ ಹಾಡುತ್ತಿದ್ರು. ಆದ್ರೂ ಉಳಿದ ಕೆಲವು ಪ್ರೇಕ್ಷಕರು ಅವರನ್ನು ಪಾಕಿಸ್ತಾನಿ ಅಂತಾ ಕರೆದಿದ್ದಾರೆ. ಈ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಅರ್ಮಾನ್ ಅಲಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆಯುವುದಾಗಿ ಹೇಳಿದ್ದಾರೆ.

ಸಿನೆಮಾ ಪ್ರಸಾರಕ್ಕೆ ಮುನ್ನ ಎಲ್ಲಾ ಥಿಯೇಟರ್ ಗಳಲ್ಲೂ ರಾಷ್ಟ್ರಗೀತೆ ಹಾಕಬೇಕು. ಪ್ರೇಕ್ಷಕರು ಎದ್ದು ನಿಂತು ಗೌರವ ಸೂಚಿಸಬೇಕೆಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಆದ್ರೆ ವಿಕಲಚೇತನರಿಗೆ ವಿನಾಯಿತಿ ನೀಡಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...