alex Certify
ಕನ್ನಡ ದುನಿಯಾ       Mobile App
       

Kannada Duniya

ಗರ್ಭಿಣಿಯಾಗಿರುವುದೇ ಗೊತ್ತಿರಲಿಲ್ಲವಂತೆ ಈ ಯುವತಿಗೆ…!

ನವದೆಹಲಿ: ಏರ್‌ ಏಷ್ಯಾ ವಿಮಾನದ ಶೌಚಾಲಯದಲ್ಲಿ ದೊರೆತ ನವಜಾತ ಶಿಶುವಿನ ಮೃತದೇಹಕ್ಕೆ ಸಂಬಂಧಪಟ್ಟಂತೆ, 19 ವರ್ಷದ ಯುವತಿ ತಾನು ಗರ್ಭಿಣಿ ಎಂದು ತಿಳಿದಿರಲಿಲ್ಲ ಎಂದು ಹೇಳಿಕೆ ನೀಡಿದ್ದಾಳೆ.

ಟೇಕ್ವಾಂಡೋ ಕ್ರೀಡಾಪಟುವಾಗಿರುವ ಅವಳು, ಇಂಫಾಲದಿಂದ ನವದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಏರ್‌ ಏಷ್ಯಾದಲ್ಲಿ ಗುರುವಾರ ಪ್ರಯಾಣಿಸಿದ್ದಳು. ಆಕೆ ಗರ್ಭಿಣಿ ಆಗಿರುವ ಬಗ್ಗೆ ಕುಟುಂಬ ಸದಸ್ಯರಿಗೂ ಗೊತ್ತಿರಲಿಲ್ಲ ಎಂದು ಯುವತಿಯ ಸಂಬಂಧಿಕರು ತಿಳಿಸಿದ್ದಾರೆ.

ಗುವಾಹಟಿ ಮೂಲದ ಯುವತಿ, ಟೇಕ್ವಾಂಡೋ ಟೂರ್ನಮೆಂಟ್‌ ನಲ್ಲಿ ಪಾಲ್ಗೊಳ್ಳಲು ಸೌತ್‌ ಕೊರಿಯಾಗೆ ತನ್ನ ಕೋಚ್‌ ಜೊತೆ ಪ್ರಯಾಣ ಬೆಳೆಸಿದ್ದಳು.

ನವದೆಹಲಿಯಲ್ಲಿ ಏರ್ ಏಷ್ಯಾ ಲ್ಯಾಂಡ್‌ ಆದ ಬಳಿಕ, ಸಿಬ್ಬಂದಿ ವಿಮಾನದ ಟಾಯ್ಲೆಟ್‌ನಲ್ಲಿ ಮೃತಪಟ್ಟ ನವಜಾತ ಶಿಶುವೊಂದನ್ನು ಗುರುತಿಸಿದ್ದಾರೆ. ವಿಮಾನದ ವೈದ್ಯಕೀಯ ವಿಭಾಗ ತಪಾಸಣೆ ನಡೆಸಿದ ಬಳಿಕ, ವಿಮಾನ ಹಾರಾಟದ ವೇಳೆಯಲ್ಲೇ ಪ್ರಸವವಾಗಿರುವುದನ್ನು ದೃಢಪಡಿಸಿದ್ದರು. ಈ ಬಗ್ಗೆ ವಿಚಾರಣೆ ಮಾಡಿದಾಗ 19 ವರ್ಷದ ಯುವತಿ ಅವಧಿಗೆ ಮುನ್ನವೇ ಪ್ರಸವವಾಗಿದ್ದನ್ನು ಒಪ್ಪಿಕೊಂಡಿದ್ದಳು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...