alex Certify
ಕನ್ನಡ ದುನಿಯಾ       Mobile App
       

Kannada Duniya

ಅಷ್ಟಕ್ಕೂ ಇಂಟರ್ನೆಟ್ ಹೇಗೆ ಕೆಲಸ ಮಾಡುತ್ತದೆ ಗೊತ್ತಾ..?

internet

ಫೇಸ್ ಬುಕ್, ಗೂಗಲ್, ವಾಟ್ಸಾಪ್ ಸೇರಿದಂತೆ ಸೋಷಿಯಲ್ ಮೀಡಿಯಾ ಇಲ್ಲದ ದಿನಗಳನ್ನು ಬಹುಶಃ ನಿರೀಕ್ಷೆ ಮಾಡಲಾಗುವುದಿಲ್ಲವೇನೋ? ಇವೆಲ್ಲಕ್ಕೂ ಇಂಟರ್ನೆಟ್ ಅನ್ನೋದು ಟಾನಿಕ್ ಇದ್ದ ಹಾಗೆ. ಹಾಗಾದರೆ ಇಂಟರ್ನೆಟ್ ಹೇಗೆ ಕೆಲಸ ಮಾಡುತ್ತದೆ ಗೊತ್ತಾ?

ಇಂಟರ್ನೆಟ್ ಅನ್ನೋದು ನೆಟ್ ವರ್ಕ್ ಗಳ ನೆಟ್ ವರ್ಕ್. ಇಂಟರ್ನೆಟ್ ನ ಕಾರ್ಯಶೈಲಿಯನ್ನ ಅರ್ಥ ಮಾಡ್ಕೊಬೇಕಾದ್ರೆ ನಾವು ಅದನ್ನ 2 ಭಾಗಗಳಾಗಿ ವಿಂಗಡಿಸಬೇಕು.

ಮೊದಲನೆಯದು ಹಾರ್ಡ್ ವೇರ್. ಇದು ಕೇಬಲ್ ಆಗಿರಬಹುದು ಅಥವಾ ರೂಟರ್ ಗಳು, ಸರ್ವರ್ ಗಳು, ಸೆಲ್ ಫೋನ್ ನ ಟವರ್, ಸ್ಯಾಟಲೈಟ್, ಸ್ಮಾರ್ಟ್ ಫೋನ್ ಕೂಡ ಆಗಿರಬಹುದು. ಇಂಟರ್ನೆಟ್ ಅನ್ನೋದು ಊಸರವಳ್ಳಿಯ ತರಹ. ಸಮಯಕ್ಕೆ ತಕ್ಕಂತೆ ಚೇಂಜ್ ಆಗ್ತಾ ಇರುತ್ತೆ. ಯಾವ ಉಪಕರಣಗಳು ಅದನ್ನ ಸೇರಿಕೊಳ್ಳುತ್ತಿವೆ, ಯಾವುದು ಅದರಿಂದ ಬಿಟ್ಟು ಹೋಗ್ತಿದೆ ಅನ್ನೋದರ ಮೇಲೆ ಇಂಟರ್ನೆಟ್ ನ ಸ್ಥಿತಿ ಅವಲಂಬಿತವಾಗಿರುತ್ತದೆ.

ಅಲ್ಲದೇ ಈ ಉಪಕರಣಗಳನ್ನು 2 ರೀತಿ ನೋಡಬಹುದು. ಒಂದು ಕನೆಕ್ಷನ್ ಅಂತಲೂ ಇನ್ನೊಂದನ್ನ ಎಂಡ್ ಪಾಯಿಂಟ್ ಅಂತಲೂ ಕರೆಯಬಹುದು. ಕಂಪ್ಯೂಟರ್, ಸ್ಮಾರ್ಟ್ ಫೋನ್ ಅಥವಾ ನೀವು ಈ ಲೇಖನ ಓದುತ್ತಿರುವ ಉಪಕರಣ, ಎಂಡ್ ಪಾಯಿಂಟ್ ಗೆ ಉದಾಹರಣೆಯಾದರೆ, ಸರ್ವರ್ ಅನ್ನು ಕನೆಕ್ಷನ್ ಉದಾಹರಣೆ ಅಂತ ಭಾವಿಸಬಹುದು. ನಮಗೆ ಬೇಕಾದ ಮಾಹಿತಿ, ಸರ್ವರ್ ನಿಂದ ಬರುತ್ತದೆ. ಅದು ಫಿಸಿಕಲ್ ಆಗಿರಬಹುದು ಅಥವಾ ವೈರ್ ಲೆಸ್ ಕೂಡ ಆಗಿರಬಹುದು.

ಆದರೆ ಕೇವಲ ಈ ಹಾರ್ಡ್ ವೇರ್, ನೆಟ್ ವರ್ಕ್ ನ ಕ್ರಿಯೇಟ್ ಮಾಡಲಿಕ್ಕೆ ಖಂಡಿತ ಸಾಧ್ಯವಿಲ್ಲ. ಅದಕ್ಕೆ ಬೇಕಾದ ಅತೀ ಮುಖ್ಯ component ಅಂದರೆ protocol. ಯಾವುದೇ ಒಂದು ಕೆಲಸವನ್ನು ಯೋಜನಾಬದ್ದವಾಗಿ ಮಾಡಬೇಕಾದ ಕ್ರಮಕ್ಕೆ protocol ಅಂತ ಕರೆಯಬಹುದು. ಈ protocol ಇಲ್ಲದೇ ಹೋದರೆ ಒಂದು device ನಿಂದ ಇನ್ನೊಂದಕ್ಕೆ ಸಂವಹನ (communication)ಸಾಧ್ಯವೇ ಆಗುವುದಿಲ್ಲ. ಅದು ಒಬ್ಬ ಕನ್ನಡಿಗ ಮತ್ತು ಚೀನೀ ಭಾಷೆಯವನನ್ನ ಒಂದು ರೂಮಿನಲ್ಲಿ ಕೂಡಿ ಹಾಕಿದ ಹಾಗಿರುತ್ತದೆ.

ಇಂಟರ್ನೆಟ್ ನ ಎರಡನೇ ಅತೀ ಮುಖ್ಯ ಭಾಗ protocol ದು.

ಬಹುಶಃ ನಮಗೆಲ್ಲ http(hypertext transfer protocol) ತುಂಬಾ ಪರಿಚಿತವಾದ protocol. ಈ ತರಹದ ಡಜನ್ ಗಟ್ಟಲೆ protocol ಗಳೂ ಸೇರಿಕೊಂಡು ಒಂದು frame work ನ create ಮಾಡಿಬಿಡ್ತವೆ. ಇಂಟರ್ನೆಟ್ ನ ಭಾಗವಾಗಬೇಕಾದರೆ ಎಲ್ಲಾ device ಗಳು ಈ frame workನ ಒಳಗೆ ಕೆಲಸ ಮಾಡಬೇಕು.TCP/IP (Transmission Control protocol & Internet Protocol) ಅನ್ನೋದು ಮತ್ತೊಂದು ಉದಾಹರಣೆಯಷ್ಟೆ. ಈ protocol ಗಳು ಇಂಟರ್ನೆಟ್ ನ ಮೂಲಕ ಮಾಹಿತಿಯನ್ನು ಹೇಗೆ transfer ಆಗಬೇಕು ಅನ್ನೋ ಅಘೋಷಿತ rules ಅನ್ನ create ಮಾಡಿಬಿಡ್ತಾವೆ. Protocol ಇಲ್ಲದೇ ಹೋದರೆ transmission of Information ಕಷ್ಟಸಾಧ್ಯ.

IP address (Internet Protocol) ಅನ್ನೋದು protocolನ ಮಾತು ಕೇಳುತ್ತದೆ. ಇಂಟರ್ನೆಟ್ ಗೆ connect ಆಗಿರುವ ಪ್ರತಿಯೊಂದು device ಗೂ ಕೂಡ IP address ಇರುತ್ತದೆ. ಈ address ನಿಂದಲೇ ಒಂದು device ನಿಂದ ಇನ್ನೊಂದು device ಗೆ ಸಂವಹನ ಸಾಧ್ಯವಾಗುತ್ತದೆ.

ನಮಗೆ ಬೇಕಾದ ವಿಷಯದ ಬಗ್ಗೆ ನಾವು ಟೈಪ್ ಮಾಡಿದರೆ, ಅದು network ಮೂಲಕ Domain Name Server (DNS) ತಲುಪಿ ಅಲ್ಲಿ ತನ್ನ target ನ ಹುಡುಕೋಕೆ ಶುರುಮಾಡುತ್ತದೆ. DNS ಸರಿಯಾಗಿ guide ಮಾಡಿ target ತಲುಪಲಿಕ್ಕೆ ಸಹಾಯ ಮಾಡುತ್ತದೆ. ಒಮ್ಮೆ target ನ ತಲುಪಿದ ಬಳಿಕ ಅದು ನಮಗೆ Response ಮಾಡುತ್ತದೆ. ಈ article ನ ಓದುವುದಕ್ಕೂ ಕೂಡ ನಿಮ್ಮ ಕಂಪ್ಯೂಟರ್ sever ಗೆ connect ಆಗಿರಬೇಕು ಅಲ್ವ ?

ಒಮ್ಮೆ ನೀವು computer ನ on ಮಾಡಿ ನಿಮ್ಮ Web Browser ನ ಕ್ಲಿಕ್ ಮಾಡಿದ ಮೇಲೆ ನಿಮಗೆ ಬೇಕಾದ Website ನ open ಮಾಡ್ತಿರ. ನೀವು ಹೀಗೆ ಮಾಡಬೇಕಾದರೆ ನಿಮ್ಮ computer ನಿಮ್ಮ Internet Service Provider (ISP) ಮೂಲಕ request ಕಳಿಸುತ್ತದೆ. ISP ಆ request ನ server ಗೆ ಕಳಿಸುತ್ತದೆ. ಕೊನೆಗೆ ಆ request, DNS ನ ತಲುಪುತ್ತದೆ. ನೀವು ಬಯಸಿದ ವಿಷಯ ಇದೆಯೋ ಇಲ್ಲವೋ ಎಂಬುದನ್ನು server ಹುಡುಕುತ್ತದೆ (ex: www.kannadadunia.com). ನಿಮ್ಮ request ಹೊಂದಿಕೆಯಾದರೆ ನಿಮಗೆ ಬಯಸಿದುದನ್ನು ಆ server ನ IP address ನ ಮೂಲಕ ಕಳಿಸುತ್ತದೆ. ಇಲ್ಲವಾದರೆ ನಮ್ಮ request ನ ಇನ್ನೊಂದು server ನಲ್ಲಿ ಹುಡುಕುವುದಕ್ಕೆ ಶುರು ಮಾಡುತ್ತದೆ.

ಒಮ್ಮೆ ನಮಗೆ ಬೇಕಾದ Information webserver ನ ತಲುಪಿದ ಬಳಿಕ packet ಗಳಾಗಿ divide ಆಗುತ್ತದೆ. ಬಳಿಕ ನಿಮ್ಮ computer ಬಳಿ ಬರುತ್ತದೆ. ನಂತರ ನಿಮ್ಮ ಕಂಪ್ಯೂಟರ್ protocol ನ use ಮಾಡಿಕೊಂಡು ಆ packet ಗಳನ್ನೂ correct ಆಗಿ ಹೊಂದಾಣಿಕೆಯಾಗುವಂತೆ receive ಮಾಡುತ್ತದೆ. ಅದರ ಅಂತಿಮ ಫಲಿತಾಂಶವೇ ನಿಮ್ಮ ಕಣ್ಣ ಮುಂದಿರುವ ಈ article.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...