alex Certify
ಕನ್ನಡ ದುನಿಯಾ       Mobile App
       

Kannada Duniya

ಮಾನಸ ಸರೋವರ ಯಾತ್ರೆ ಸಂದರ್ಭದಲ್ಲಿ ರಾಹುಲ್ ಸೇವಿಸಿದ ಆಹಾರವೇನು?

ಚೈನಾ ಮೂಲಕ ಕೈಲಾಸ ಹಾಗೂ ಮಾನಸ ಸರೋವರ ಯಾತ್ರೆ ಮಾಡುತ್ತಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಮಾಂಸಾಹಾರ ಸೇವಿಸಲು ಮುಂದಾಗಿದ್ದರು ಎಂದು ನೇಪಾಳದ ಸುದ್ದಿವಾಹಿನಿಯೊಂದು ವರದಿ ಮಾಡಿದ್ದು, ಇದಕ್ಕೆ ಈಗ ಸ್ಪಷ್ಟನೆ ನೀಡಲಾಗಿದೆ.

ಈ ವಿಚಾರ ಇನ್ನಷ್ಟು ವೈರಲ್ ಆಗುವ ಮುನ್ನವೇ ರಾಹುಲ್‌ ತಂಗಿರುವ ಹೋಟೆಲ್‌ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಯಾತ್ರೆಯ ವೇಳೆ ಅವರು ಶುದ್ಧ ಸಸ್ಯಾಹಾರವನ್ನೇ ನೀಡುವಂತೆ ಹೇಳಿರುವುದಾಗಿ ಹೋಟೆಲ್‌ ಮಾಹಿತಿ ನೀಡಿದೆ.

ಆ.31ರಂದು ಯಾತ್ರೆ ಆರಂಭಿಸಿರುವ ರಾಹುಲ್‌ ಗಾಂಧಿ ನೇಪಾಳದ ಕಾಠ್ಮಂಡುವಿನ ಸಣ್ಣ ಹೋಟೆಲ್‌ ಒಂದರಲ್ಲಿ ರಾತ್ರಿಯ ಊಟ ಮಾಡಿದ್ದಾರೆ. ಕೈಲಾಸ ಮಾನಸ ಸರೋವರದ ಮಾರ್ಗದಲ್ಲಿ ಹೋಟೆಲ್ ಇದ್ದು, ಅಚಾನಕ್‌ ಆಗಿ ದೇಶದ ಪ್ರಸಿದ್ಧ ರಾಜಕೀಯ ನಾಯಕ ಹೋಟೆಲ್‌ಗೆ ಅತಿಥಿಯಾಗಿ ಬಂದಿದ್ದರು. ನೆವಾರಿ ಆಹಾರವನ್ನು ಅವರು ಸೇವಿಸಿದ್ದರು ಎಂದು ಹೋಟೆಲ್‌ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ಸಸ್ಯಾಹಾರ ಹಾಗೂ ಮಾಂಸಾಹಾರವನ್ನು ಸಿದ್ದಪಡಿಸುವ ಹೋಟೆಲ್‌ನಲ್ಲಿ ರಾಹುಲ್‌ ಮಾಂಸಾಹಾರ ಸೇವಿಸಿದ್ದಾರೆ ಎಂದು ನೇಪಾಳದಲ್ಲಿ ಸುದ್ದಿಯಾಗಿತ್ತು. ಹೋಟೆಲ್‌ ಮೆನು ಪ್ರಕಾರ ನೆವಾರಿ ಎಬ ಆಹಾರ ಶಾಖಾಹಾರಿ ಹಾಗೂ ಮಾಂಸಾಹಾರದ 2 ವಿಧದಲ್ಲಿ ದೊರೆಯಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...