alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿಯವರ ಪದವಿ ಕುರಿತು ಮತ್ತಷ್ಟು ಪ್ರಶ್ನೆ ಎತ್ತಿದ ಆಪ್

aap press meetಪ್ರಧಾನಿ ನರೇಂದ್ರ ಮೋದಿಯವರ ಪದವಿ ಹಾಗೂ ಸ್ನಾತಕೋತ್ತರ ಪದವಿ ಕುರಿತ ಗೊಂದಲಗಳಿಗೆ ತೆರೆ ಎಳೆಯುವ ಸಲುವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪತ್ರಿಕಾಗೋಷ್ಟಿ ನಡೆಸಿ ಪದವಿ ಸರ್ಟಿಫಿಕೇಟ್ ಗಳನ್ನು ಪ್ರದರ್ಶಿಸಿದ್ದರು. ಆದರೆ ಇದರಿಂದಾಗಿ ಗೊಂದಲ ಮತ್ತಷ್ಟು ಹೆಚ್ಚಿದೆ.

ಈ ವಿಷಯ ಕುರಿತಂತೆ ಮೋದಿಯವರ ಬೆನ್ನು ಬಿದ್ದಿರುವ ಆಮ್ ಆದ್ಮಿ ಪಕ್ಷದ ಮುಖಂಡರು, ಅಮಿತ್ ಶಾ ಪ್ರದರ್ಶಿಸಿರುವ ಸರ್ಟಿಫಿಕೇಟ್ ಗಳು ನಕಲಿ ಎಂದು ಹೇಳಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಆಪ್ ನಾಯಕ ಅಶುತೋಶ್, ಪ್ರಧಾನಿಯವರ ಮಾರ್ಕ್ಸ್ ಶೀಟ್ ನಲ್ಲಿ ಅಂಕಗಳು ಪ್ರಿಂಟ್ ಆಗಿವೆ. ಆದರೆ 1978 ರಲ್ಲಿ ದೆಹಲಿ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿರುವವರ ಅಂಕಗಳು ಕೈ ಬರಹದಲ್ಲಿವೆ ಎಂದರಲ್ಲದೇ 1978 ರಲ್ಲಿ ದೆಹಲಿ ವಿಶ್ವವಿದ್ಯಾನಿಲಯ ಕಂಪ್ಯೂಟರ್ ಹೊಂದಿತ್ತೇ ಎಂದು ಪ್ರಶ್ನಿಸಿದ್ದಾರೆ.

ಅಲ್ಲದೇ 2015 ರಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತ ಅನಿಲ್ ಗಲಗಲಿ, ದೆಹಲಿ ವಿಶ್ವವಿದ್ಯಾನಿಲಯದಿಂದ 1978 ರಲ್ಲಿ ಪದವಿ ಪಡೆದಿರುವವರ ಪಟ್ಟಿ ಕೊಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗೆ ಉತ್ತರಿಸಿದ್ದ ವಿಶ್ವವಿದ್ಯಾನಿಲಯ, ಅಷ್ಟು ಹಳೆಯ ದಾಖಲೆಗಳನ್ನು ಸಂಗ್ರಹಿಸಿಟ್ಟಿರುವುದಿಲ್ಲವೆಂದು ತಿಳಿಸಿತ್ತು. ಈಗ ವಿವಿ ಅಧಿಕಾರಿಗಳು ಯಾವ ಆಧಾರದ ಮೇಲೆ ಮೋದಿಯವರ ಪದವಿ ಅಸಲಿ ಎಂದು ಹೇಳುತ್ತಿದ್ದಾರೆಂದು ಕೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...