alex Certify
ಕನ್ನಡ ದುನಿಯಾ       Mobile App
       

Kannada Duniya

ಬತ್ತಿ ಹೋಗಿದ್ದ ನದಿಗೆ ಜೀವ ಕಳೆ ತಂದ ಶ್ರೀಮಂತ

a007c9281606452592279105d0d59838

ಆಗರ್ಭ ಶ್ರೀಮಂತರಿಗೆ ಬಡ ಜನರ ಕಷ್ಟ ಕಾರ್ಪಣ್ಯಗಳು ಅರ್ಥವಾಗುವುದಿಲ್ಲ. ಸದಾ ಐಷಾರಾಮಿ ಜೀವನದಲ್ಲೇ ಕಾಲ ಕಳೆಯುವ ಅವರುಗಳಿಗೆ ಬಡವರೆಂದರೆ ತಾತ್ಸಾರ ಎಂಬ ಮಾತಿದೆ. ಆದರೆ ಈ ಮಾತಿಗೆ ಅಪವಾದವೆಂಬಂತೆ ಭಾರೀ ಶ್ರೀಮಂತರೊಬ್ಬರು ಸಾರ್ಥಕ ಕಾರ್ಯ ಮಾಡಿದ್ದಾರೆ.

ಗುಜರಾತಿನ ತೇಸಿಯಾ ಗ್ರಾಮದ 65 ವರ್ಷದ ಜೆರಾಮ್ ಎಂಬವರು ತಮ್ಮ ಹುಟ್ಟೂರಿನ ಸ್ಥಳದ ಸುತ್ತಮುತ್ತಲಿನ ರೈತರಿಗೆ ಅನುಕೂಲವಾಗುವ ಸಲುವಾಗಿ ಬತ್ತಿ ಹೋಗಿದ್ದ ತೇಬಿ ನದಿಗೆ ಜೀವ ಕಳೆ ತಂದಿದ್ದಾರೆ. ಸುಮಾರು 15 ಕೋಟಿ ರೂ. ವೆಚ್ಚ ಮಾಡಿ ನದಿಯ ಆಳ ಮತ್ತು ಆಗಲವನ್ನು ವಿಸ್ತಾರ ಮಾಡಲಾಗಿದ್ದು, ಇದರಿಂದಾಗಿ ಸುತ್ತಮುತ್ತಲ 20 ಗ್ರಾಮದ ರೈತರಿಗೆ ಅನುಕೂಲವಾಗಲಿದೆ ಎನ್ನಲಾಗಿದೆ.

ಸೂರತ್ ನಲ್ಲಿ ವಜ್ರ ವ್ಯಾಪಾರಿಯಾಗಿರುವ ಜೆರಾಮ್ ಕಳೆದ ಮೂರು ತಿಂಗಳಿನಿಂದ ಈ ಕಾರ್ಯ ಮಾಡಿಸುತ್ತಿದ್ದು, 70,000 ಭಿಗಾ ಜಮೀನಿಗೆ ನೀರು ಸಿಗಲಿದೆ ಎನ್ನಲಾಗಿದೆ. ಹುಟ್ಟಿದ ಊರಿಗೆ ಸಾರ್ಥಕ ಸೇವೆ ಮಾಡಬೇಕೆಂದು ತಾವು ಕನಸು ಕಾಣುತ್ತಿದ್ದು, ಅದೀಗ ನನಸಾಗುವ ಕಾಲ ಬಂದಿದೆ ಎಂದು ಜೆರಾಮ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...