alex Certify
ಕನ್ನಡ ದುನಿಯಾ       Mobile App
       

Kannada Duniya

ಎಲ್ಲರ ಗಮನ ಸೆಳೆಯುತ್ತಿದ್ದಾನೆ ಈ ವಜ್ರ ಗಣಪ

ಗಣೇಶ ಹಬ್ಬದ ಸಂದರ್ಭದಲ್ಲಿ ವಿಭಿನ್ನ ಮತ್ತು ವಿಶಿಷ್ಟ ಶೈಲಿಯ ಗಣಪನ ಮೂರ್ತಿಗಳು ಇಡೀ ದೇಶದ ಗಮನ ಸೆಳೆಯುತ್ತವೆ. ಗುಜರಾತ್ ನ ಸೂರತ್ ನಲ್ಲಿ ವಜ್ರ ಖಚಿತ ವಿನಾಯಕನ ಮೂರ್ತಿಗಳು ಈಗ ಹೆಚ್ಚಿನ ಜನರನ್ನು ಆಕರ್ಷಿಸುತ್ತಿವೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಗಣಪನ ದರ್ಶನಕ್ಕಾಗಿ ಆಗಮಿಸುತ್ತಿದ್ದಾರೆ.

ಗೋಲ್ಡನ್ ಟೆಂಪಲ್ ಮತ್ತು ಬಾಹುಬಲಿಯ ಥೀಮ್ ನಲ್ಲಿ ನಿರ್ಮಾಣವಾಗಿರುವ ಗಣೇಶ ಪೆಂಡಾಲ್ ನಲ್ಲಿ ಎರಡು ಗಣೇಶ ಮೂರ್ತಿಗಳನ್ನ ಪ್ರತಿಷ್ಠಾಪನೆ ಮಾಡಲಾಗಿದೆ. ಚಿಕ್ಕದಾಗಿರುವ ಗಣೇಶನನ್ನ ಸಂಪೂರ್ಣವಾಗಿ ಬೆಳ್ಳಿಯಿಂದ ಮಾಡಲಾಗಿದೆ. ಹಾಗು ಆ ವಿಗ್ರಹದಲ್ಲಿ ಒಂದೂವರೆ ಲಕ್ಷ ವಜ್ರಗಳನ್ನ ಬಳಸಲಾಗಿದೆ.

ಗಣೇಶನಿಗೆ ಹರಕೆ ಕಟ್ಟಿಕೊಂಡಿದ್ದವರು ತಮ್ಮ ಕೋರಿಕೆ ಈಡೇರಿದ ಮೇಲೆ ವಜ್ರಗಳನ್ನ ಕಾಣಿಕೆ ರೂಪದಲ್ಲಿ ಸಲ್ಲಿಸಿದ್ದಾರೆ. ಆ ವಜ್ರಗಳನ್ನು ಕೂಡ ಈ ಗಣಪತಿಯ ಮೂರ್ತಿ ತಯಾರಿಕೆಗೆ ಬಳಸಲಾಗಿದೆ ಅಂತಾರೆ ಉತ್ಸವದ ಆಯೋಜಕರಾದ ಗೌರವ್ ಜರಿವಾಲ್. ತಮ್ಮ ಕೋರಿಕೆ ಈಡೇರಿದ ಮತ್ತೊಬ್ಬ ಭಕ್ತರು ಬೆಳ್ಳಿ ಮೂಷಿಕನನ್ನು ಕಾಣಿಕೆಯಾಗಿ ನೀಡಿದ್ದಾರಂತೆ.

ವಜ್ರ ಮತ್ತು ಬೆಳ್ಳಿ ಗಣಪತಿಯ ಜೊತೆಗೆ ಪ್ರತಿಷ್ಠಾಪಿಸಲಾಗಿರುವ ಮತ್ತೊಂದು ಬೃಹತ್ ಮೂರ್ತಿಯ ಹಸ್ತ, ಪಾದ, ಕಿವಿಗಳನ್ನ ಕೂಡ ಚಿನ್ನ, ಬೆಳ್ಳಿ ಮತ್ತು ವಜ್ರದಿಂದ ಮಾಡಲಾಗಿದೆ. 10 ದಿನಗಳ ಕಾಲ ನಡೆಯುವ ಈ ಗಣೇಶ ಉತ್ಸವಕ್ಕೆ ಸರಿ ಸುಮಾರು 4 ರಿಂದ 5 ಲಕ್ಷ ಮಂದಿ ಈ ವಜ್ರ, ಚಿನ್ನ ಮತ್ತು ಬೆಳ್ಳಿ ಖಚಿತ ಗಣಪನ ದರ್ಶನ ಪಡೀತಾರಂತೆ.

ಸುಮಾರು 80 ಸಾವಿರದಷ್ಟು ಆಸ್ಟ್ರೇಲಿಯಾ ಮತ್ತು ಅಮೆರಿಕದ ವಜ್ರಗಳನ್ನ ಬಳಸಲಾಗಿದೆಯಂತೆ. 10 ರಿಂದ 15 ಕೆಜಿಗಳಷ್ಟು ಚಿನ್ನ, ಬೆಳ್ಳಿಯ ಆಭರಣಗಳು ಮೂರ್ತಿಯ ಮೇಲಿವೆಯಂತೆ. ಸಿಸಿ ಟಿವಿ ಕ್ಯಾಮರಾಗಳ ಮೂಲಕ ಈ ಗಣಪತಿಯ ಮೂರ್ತಿಗಳನ್ನ ಕಾವಲು ಕಾಯಲಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...