alex Certify
ಕನ್ನಡ ದುನಿಯಾ       Mobile App
       

Kannada Duniya

ನೌಕರರಿಗೆ ಕಾರ್ ಕೊಟ್ಟಿದ್ದ ಉದ್ಯಮಿಯಿಂದ ಮಾದರಿ ಕಾರ್ಯ

kere-diamonddd

ಸೂರತ್: ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವ ನೌಕರರಿಗೆ ಕಾರ್, ಫ್ಲ್ಯಾಟ್ ಗಳನ್ನು ಉಡುಗೊರೆಯಾಗಿ ಕೊಟ್ಟಿದ್ದ ಸೂರತ್ ಉದ್ಯಮಿ ಸಾವ್ ಜಿ ಧೋಲಾಕಿಯಾ ಮಾದರಿ ಕೆಲಸಕ್ಕೆ ಮುಂದಾಗಿದ್ದಾರೆ.

ವಜ್ರದ ವ್ಯಾಪಾರಿ, ಹರೆಕೃಷ್ಣ ಎಕ್ಸ್ ಪೋರ್ಟ್ಸ್ ಮಾಲೀಕರಾಗಿರುವ ಸಾವ್ ಜಿ ಧೋಲಾಕಿಯಾ ದೀಪಾವಳಿ ಸಂದರ್ಭದಲ್ಲಿ ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವ ನೌಕರರಿಗೆ 1260 ಕಾರ್ ಹಾಗೂ 400 ಫ್ಲ್ಯಾಟ್ ಗಳನ್ನು ಕೊಟ್ಟಿದ್ದರು.

ಅವರು ತಮ್ಮ ಹುಟ್ಟೂರಾಗಿರುವ ಅಮ್ರೆಲಿ ಜಿಲ್ಲೆಯ ದುಧಾಲ ಗ್ರಾಮದ ಕೆರೆಯನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಸುತ್ತಮುತ್ತಲಿನ ಸುಮಾರು 20 ಗ್ರಾಮಗಳ 80,000 ಕ್ಕೂ ಅಧಿಕ ಮಂದಿ ನೀರಿನ ಕೊರತೆ ಎದುರಿಸುತ್ತಿದ್ದಾರೆ.

ಅನೇಕ ವರ್ಷಗಳಿಂದಲೂ ಸಮಸ್ಯೆ ಹಾಗೆಯೇ ಉಳಿದಿದೆ. ಈ ಕೆರೆಯನ್ನು ಅಭಿವೃದ್ಧಿಪಡಿಸಿದಲ್ಲಿ ಸುತ್ತಲಿನ ಗ್ರಾಮಗಳ ಜನ, ಜಾನುವಾರುಗಳಿಗೆ ಅನುಕೂಲವಾಗಲಿದೆ. ಇದನ್ನು ಮನಗಂಡ ಸಾವ್ ಜಿ ಧೋಲಾಕಿಯಾ ಕೆರೆ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ.

ಈಗಾಗಲೇ ಕೆಲಸ ಆರಂಭವಾಗಿದೆ. ಜೆ.ಸಿ.ಬಿ., ಟಿಪ್ಪರ್ ಸೇರಿದಂತೆ ಹತ್ತಾರು ವಾಹನಗಳು, ಕೆಲಸಗಾರರು ಅಭಿವೃದ್ಧಿ ಕಾರ್ಯದಲ್ಲಿ ನಿರತರಾಗಿದ್ದಾರೆ. ಮಳೆಗಾಲದಲ್ಲಿ ಕೆರೆ ತುಂಬಿದಲ್ಲಿ 1 ವರ್ಷದವರೆಗೂ ನೀರಿನ ಸಮಸ್ಯೆಯಾಗುವುದಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...