alex Certify
ಕನ್ನಡ ದುನಿಯಾ       Mobile App
       

Kannada Duniya

ಒಂದೇ ಕಾಲಿನಲ್ಲಿ ವಿದ್ಯಾರ್ಥಿನಿ ಮಾಡಿದ್ಲು ಅದ್ಬುತ ಡಾನ್ಸ್

ಮನಸ್ಸಿದ್ರೆ ಯಾವುದೂ ಕಷ್ಟವಲ್ಲ ಜೋದ್ಪುರದಲ್ಲಿ ಸರ್ವ ಶಿಕ್ಷಾ ಅಭಿಯಾನದಡಿ ನಡೆದ ಕಾರ್ಯಕ್ರಮದಲ್ಲಿ 13 ವರ್ಷದ ವಿದ್ಯಾರ್ಥಿನಿಯೊಬ್ಬಳು ಈ ಮಾತನ್ನು ಮತ್ತೆ ಸಾಬೀತುಪಡಿಸಿದ್ದಾಳೆ. ವಿದ್ಯಾರ್ಥಿನಿ ವೇದಿಕೆ ಮೇಲೆ ಬರ್ತಿದ್ದಂತೆ ಎಲ್ಲರೂ ನಿಬ್ಬೆರಗಾಗಿ ನೋಡ್ತಿದ್ದರು. ಆಕೆ ಡಾನ್ಸ್ ಮಾಡಲು ಶುರುಮಾಡಿದಾಗ ನೆರೆದಿದ್ದವರು ಚಪ್ಪಾಳೆ ಹೊಡೆಯುವುದನ್ನು ಮರೆತಿದ್ದರು.

ಸತತ 5 ನಿಮಿಷಗಳ ಕಾಲ ಒಂದೇ ಕಾಲಿನಲ್ಲಿ ನೃತ್ಯ ಮಾಡಿದ ವಿದ್ಯಾರ್ಥಿನಿ ನೆರೆದಿದ್ದವರ ಮನ ಗೆಲ್ಲುವಲ್ಲಿ ಯಶಸ್ವಿಯಾದ್ಲು. ಕಸ್ತೂರ ಬಾ ಗಾಂಧಿ ಬಾಲಕಿಯರ ಶಾಲೆಯಲ್ಲಿ ಓದುತ್ತಿರುವ ಸುನಿತಾ ಮೂರು ವರ್ಷದವಳಿದ್ದಾಗಲೇ ಒಂದು ಕಾಲನ್ನು ಕಳೆದುಕೊಂಡಿದ್ದಾಳೆ. ಕಾಲು ಕಳೆದುಕೊಂಡ್ರು ಆತ್ಮಸ್ಥೈರ್ಯ ಕಳೆದುಕೊಳ್ಳದ ಸುನಿತಾ ಸಾಧಿಸಿ ತೋರಿಸುವ ಛಲ ಹೊಂದಿದ್ದಾಳೆ.

ವಿದ್ಯಾಭ್ಯಾಸದಲ್ಲಿಯೂ ಬುದ್ದಿವಂತೆಯಾಗಿರುವ ಸುನಿತಾ ಎಲ್ಲದರಲ್ಲಿಯೂ ಮುಂದಿದ್ದಾಳೆ. ಡಾನ್ಸ್ ಮಾಡುವುದೊಂದೇ ಅಲ್ಲ, ಬಹುತೇಕ ಸಂದರ್ಭಗಳಲ್ಲಿ ಊರುಗೋಲಿಲ್ಲದೆ ನಡೆಯುವ ಪ್ರಯತ್ನ ಮಾಡ್ತಾಳೆಂದು ಶಿಕ್ಷಕರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...