alex Certify
ಕನ್ನಡ ದುನಿಯಾ       Mobile App
       

Kannada Duniya

ಧೂಮ್-2 ಸ್ಟೈಲ್ ನಲ್ಲಿ ನಡೀತು ಕಳ್ಳತನ

ಬಾಲಿವುಡ್ ಚಿತ್ರ ಧೂಮ್-2 ಶೈಲಿಯಲ್ಲಿ ದೆಹಲಿಯ ಮ್ಯೂಸಿಯಂನಲ್ಲಿ ಕಳ್ಳತನ ನಡೆದಿದೆ. ದೆಹಲಿಯ ರಾಷ್ಟ್ರೀಯ ಕರಕುಶಲ ಮತ್ತು ಕೈಚೀಲ ವಸ್ತು ಸಂಗ್ರಹಾಲಯದಲ್ಲಿ 16 ಹಳೆಯ ಪಾಶ್ಮೀನಾ ಶಾಲುಗಳನ್ನು ಕಳ್ಳತನ ಮಾಡಲಾಗಿದೆ. ಇದ್ರ ಬೆಲೆ ಸುಮಾರು 2 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದ್ದು, ಗುರುವಾರ ತಡರಾತ್ರಿ ಪೊಲೀಸರು ಮೂರು ಮಂದಿಯನ್ನು ಬಂಧಿಸಿದ್ದಾರೆ.

ಮ್ಯೂಸಿಯಂನಲ್ಲಿ ಸಿಸಿ ಟಿವಿ ಹಾಳಾಗಿತ್ತು. ಇದನ್ನು ತಿಳಿದಿದ್ದ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ಕಳ್ಳತನವಾದ ಒಂದು ಶಾಲು ಕಾಶ್ಮೀರದಿಂದ ತರಲಾಗಿತ್ತು. ಅದು ಸುಮಾರು 200-250 ವರ್ಷ ಹಳೆಯದು ಎಂದು ಪೊಲೀಸರು ತಿಳಿಸಿದ್ದಾರೆ.

ಭದ್ರತೆ ಬಗ್ಗೆ ಪರೀಕ್ಷೆ ನಡೆಸಲು ಮುಖ್ಯ ಆರೋಪಿ ವಿನಯ್ ಎಂಬಾತ ಮ್ಯೂಸಿಯಂಗೆ ಬಂದಿದ್ದ. ಮ್ಯೂಸಿಯಂ ಬಂದ್ ಆದ್ರೂ ಅದ್ರೊಳಗೆ ಇದ್ದ ವಿನಯ್ ನಂತ್ರ ಕೂಗಿ ಭದ್ರತಾ ಪಡೆಯನ್ನು ಕರೆದಿದ್ದ. ಕಳ್ಳತನ ನಡೆದ ದಿನ ಕೂಡ ಇನ್ನೊಬ್ಬ ಆರೋಪಿ ಮ್ಯೂಸಿಯಂ ಒಳ ಸೇರಿದ್ದಾನೆ. ಮ್ಯೂಸಿಯಂ ಬಾಗಿಲು ಮುಚ್ಚಿದ ನಂತ್ರ ಫೋನ್ ನಲ್ಲಿ ಯಾವ ಯಾವ ಶಾಲುಗಳನ್ನು ಕಳ್ಳತನ ಮಾಡಬೇಕೆಂದು ವಿನಯ್ ನಿಂದ ಮಾಹಿತಿ ಪಡೆದು ಕಿಟಕಿ ಗ್ಲಾಸ್ ಒಡೆದು ಹೊರ ಬಂದಿದ್ದಾನೆ.

ಘಟನೆ ನಡೆದ ದಿನ ಸಿಸಿ ಟಿವಿ ಹಾಳಾಗಿತ್ತು. ಹಿಂದಿನ ದಿನದ ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಅನುಮಾನಾಸ್ಪದ ವ್ಯಕ್ತಿಗಳು ಕಾಣಸಿಕ್ಕಿದ್ದಾರೆ. ಅವರನ್ನು ವಿಚಾರಣೆ ನಡೆಸಿದಾಗ ಸತ್ಯ ಹೊರಬಿದ್ದಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...