alex Certify
ಕನ್ನಡ ದುನಿಯಾ       Mobile App
       

Kannada Duniya

ತಮಿಳುನಾಡು ಸಿಎಂ ಪದಚ್ಯುತಿಗೆ ಯತ್ನ…?

ತಮಿಳುನಾಡು ಉಪ ಮುಖ್ಯಮಂತ್ರಿ ಒ. ಪನ್ನೀರ್ ಸೆಲ್ವಮ್ ಅವರು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಅವರನ್ನು ಪದಚ್ಯುತಗೊಳಿಸುವ ಸಲುವಾಗಿ ನನ್ನನ್ನು ಭೇಟಿ ಮಾಡಲು ಬಯಸಿದ್ದರು ಎಂಬುದಾಗಿ ಎಎಂಎಂಕೆ ಮುಖಂಡ ಟಿಟಿವಿ ದಿನಕರನ್ ಆರೋಪಿಸಿದ್ದಾರೆ.

ಮತ್ತೊಂದೆಡೆ ಈ ಆರೋಪವನ್ನು ತಳ್ಳಿ ಹಾಕಿರುವ ಎಐಎಡಿಎಂಕೆ, ಪಕ್ಷದೊಳಗೆ ಗೊಂದಲ ಮೂಡಿಸುವ ಸಲುವಾಗಿ ದಿನಕರನ್ ಈ ರೀತಿ ಹೇಳುತ್ತಿದ್ದಾರೆ ಎಂದು ಪ್ರತ್ಯಾರೋಪಿಸಿದೆ.

ಪನ್ನೀರ್ ಸೆಲ್ವಮ್ ನನ್ನನ್ನು ಮುಖ್ಯಮಂತ್ರಿ ಮಾಡುವುದಾಗಿ ಕಳೆದ ವರ್ಷ ಭರವಸೆ ನೀಡಿದ್ದರು. ಅಲ್ಲದೆ ಪಳನಿಸ್ವಾಮಿ ನನ್ನನ್ನು ಸೈಡ್‍ಲೈನ್ ಮಾಡಿದ್ದರು ಎಂದಿರುವ ದಿನಕರನ್, ಜುಲೈನಲ್ಲಿ ಪನ್ನೀರ್ ಸೆಲ್ವಮ್ ತಮ್ಮನ್ನು ಭೇಟಿಯಾಗಿದ್ದರು.

ಜೊತೆಗೆ ಸೆಪ್ಟೆಂಬರ್‍ನಲ್ಲಿ ಮತ್ತೆ ಭೇಟಿಯಾಗುವಂತೆ ಸ್ನೇಹಿತರೊಬ್ಬರ ಮೂಲಕ ಆಹ್ವಾನ ಕಳಿಸಿದ್ದರು. ಆದರೆ ನಾನು ಭೇಟಿಗೆ ಒಪ್ಪಿರಲಿಲ್ಲ. ಅವರಿಗೆ ಮುಖ್ಯಮಂತ್ರಿಯವರನ್ನು ಪದಚ್ಯುತಿಗೊಳಿಸುವ ಉದ್ದೇಶವಿದೆ ಎಂದು ಆರೋಪಿಸಿದ್ದಾರೆ. ಇದೀಗ ತಮಿಳುನಾಡು ರಾಜಕೀಯದಲ್ಲಿ ಇದು ಸಂಚಲನ ಸೃಷ್ಟಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...