alex Certify
ಕನ್ನಡ ದುನಿಯಾ       Mobile App
       

Kannada Duniya

ತಿರುಪತಿ ತಿಮ್ಮಪ್ಪನಿಗೆ ಕೋಟಿ ರೂ. ಅರ್ಪಿಸಿದ ಭಕ್ತ

Tirumalatemple_2

ವಿಶ್ವದ ಅತ್ಯಂತ ಶ್ರೀಮಂತ ದೇವರು ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಭಕ್ತರೊಬ್ಬರು 1 ಕೋಟಿ ರೂ. ಅರ್ಪಿಸಿದ್ದು, ಈ ಹಣವನ್ನು ಅನ್ನ ದಾಸೋಹಕ್ಕೆ ಬಳಸಿಕೊಳ್ಳುವಂತೆ ದೇವಾಲಯದ ಆಡಳಿತ ಮಂಡಳಿಗೆ ಮನವಿ ಮಾಡಿದ್ದಾರೆ.

ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಉದ್ಯಮಿಯಾಗಿರುವ ಟಿ. ಶ್ರೀನಿವಾಸ ರಾವ್, 1 ಕೋಟಿ ರೂ. ಮೊತ್ತದ ಡಿ.ಡಿ. ಯನ್ನು ದೇವಾಲಯದ ಆಡಳಿತಾಧಿಕಾರಿಗಳಿಗೆ ಟಿಟಿಡಿ ಅತಿಥಿ ಗೃಹದಲ್ಲಿ ಹಸ್ತಾಂತರಿಸಿದ್ದಾರೆ.

ಈ ಮೊತ್ತದ ಡಿ.ಡಿ. ಯನ್ನು ಸ್ವೀಕರಿಸಿರುವ ತಿರುಪತಿ ತಿರುಮಲ ದೇವಸ್ಥಾನಂ ಅಧಿಕಾರಿಗಳು, ಶ್ರೀನಿವಾಸ್ ಅವರ ಮನವಿಯಂತೆ ತಿರುಪತಿಗೆ ಆಗಮಿಸುವ ಭಕ್ತರಿಗೆ ನೀಡಲಾಗುತ್ತಿರುವ ಅನ್ನ ದಾಸೋಹಕ್ಕೆ ಇದನ್ನು ಬಳಸಿಕೊಳ್ಳುವುದಾಗಿ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...