alex Certify
ಕನ್ನಡ ದುನಿಯಾ       Mobile App
       

Kannada Duniya

ತಿರುಪತಿ ತಿಮ್ಮಪ್ಪನ ಹುಂಡಿಯಲ್ಲಿತ್ತು 2.5 ಕೋಟಿ ರೂ. ಫುಟ್ಬಾಲ್

ತಿರುಪ಻ತಿ

ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ಎಂದೇ ಖ್ಯಾತವಾಗಿರುವ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಯಾವಾಗಲು ಜನಸಾಗರವೇ ನೆರೆದಿರುತ್ತದೆ. ಹೀಗೆ ಬರುವ ಭಕ್ತರು ಕಾಣಿಕೆ ರೂಪದಲ್ಲಿ ಹಣ, ಚಿನ್ನ ಮೊದಲಾದವುಗಳನ್ನು ದೇವರಿಗೆ ಅರ್ಪಿಸಿ ಕೃತಾರ್ಥರಾಗುತ್ತಾರೆ. ತಮ್ಮ ಕೋರಿಕೆಗಳನ್ನು ನೆರವೇರಿಸುವಂತೆ ಪ್ರಾರ್ಥಿಸುತ್ತಾರೆ.

ತಿರುಪತಿ ತಿರುಮಲ ದೇವಸ್ಥಾನಕ್ಕೆ ನಿತ್ಯವೂ ಸಾವಿರಾರು ಜನ ಭೇಟಿ ಕೊಡುತ್ತಾರೆ. ಹೀಗೆ ಭೇಟಿ ಕೊಡುವ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗೆ ತಮ್ಮ ಶಕ್ತ್ಯಾನುಸಾರ ಕಾಣಿಕೆ ಅರ್ಪಿಸುತ್ತಾರೆ. ಕೆಲವರು ವಜ್ರ, ವೈಡೂರ್ಯ, ಚಿನ್ನವನ್ನು ಅರ್ಪಿಸಿದರೆ, ಮತ್ತೆ ಕೆಲವರು ಹಣ ಹೀಗೆ ತಮ್ಮ ಕೈಲಾದಷ್ಟು ಕಾಣಿಕೆ ಅರ್ಪಿಸಿ ದೇವರ ದರ್ಶನ ಪಡೆದು ಪ್ರಾರ್ಥಿಸುತ್ತಾರೆ. ಹೀಗೆ ತಿರುಮಲ ದೇವಾಲಯಕ್ಕೆ ಭಕ್ತರೊಬ್ಬರು ಬರೋಬ್ಬರಿ 2.5 ಕೋಟಿ ರೂ ಮೌಲ್ಯದ ವಜ್ರ ಖಚಿತ ಚಿನ್ನದ ಫುಟ್ ಬಾಲ್ ಕಾಣಿಕೆಯಾಗಿ ಅರ್ಪಿಸಿದ್ದಾರೆ.

ಅನಾಮಧೇಯ ಭಕ್ತರೊಬ್ಬರು ಹೀಗೆ ವಜ್ರಖಚಿತ ಚಿನ್ನದ ಫುಟ್ ಬಾಲ್ ಅನ್ನು ದೇವರ ಕಾಣಿಕೆ ಹುಂಡಿಯಲ್ಲಿ ಹಾಕಿದ್ದು, ಅದನ್ನು ದೇವಾಲಯದ ಆಡಳಿತ ಮಂಡಳಿಯವರು ಖಜಾನೆಯಲ್ಲಿ ಇಟ್ಟಿದ್ದಾರೆ. ಫುಟ್ ಬಾಲ್ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ ಭಕ್ತರು ಈ ರೀತಿ ದುಬಾರಿ ಬೆಲೆಯ ಫುಟ್ ಬಾಲ್ ಹುಂಡಿಗೆ ಹಾಕಿರಬಹುದೆಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...