alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೀತಿಯಲ್ಲಿ ಬಿದ್ದ ಅತ್ತಿಗೆ-ಮೈದುನನ ತಲೆ ಬೋಳಿಸಿ ಮೆರವಣಿಗೆ

ಜಾರ್ಖಂಡನ ಹಜರಿಬಾಗ್ ನಲ್ಲಿ ಅತ್ತಿಗೆ-ಮೈದುನನ ತಲೆ ಬೋಳಿಸಿ ಊರು ಸುತ್ತಿಸಿದ ಘಟನೆ ಬೆಳಕಿಗೆ ಬಂದಿದೆ. ಇಬ್ಬರಿಗೂ ಗ್ರಾಮಸ್ಥರು ಹೊಡೆದಿದ್ದಾರೆಂಬ ಆರೋಪ ಕೂಡ ಕೇಳಿ ಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

ದಶರತ್ ಎಂಬ ವ್ಯಕ್ತಿಗೆ ಅತ್ತಿಗೆ ಮೇಲೆ ಪ್ರೀತಿ ಚಿಗುರಿತ್ತು. ಪ್ರೀತಿ ಗುಂಗಿನಲ್ಲಿ ಇಬ್ಬರೂ ಮನೆ ಬಿಟ್ಟು ಓಡಿ ಹೋಗಿದ್ದರು. 9 ತಿಂಗಳ ನಂತ್ರ ಮತ್ತೆ ಗ್ರಾಮಕ್ಕೆ ವಾಪಸ್ ಆಗಿದ್ದಾರೆ. ಪ್ರಕರಣ ಪಂಚಾಯತಿ ಮೆಟ್ಟಿಲೇರಿದೆ. ಪಂಚರು ತಲೆ ಬೋಳಿಸಿ ಊರು ಸುತ್ತುವಂತೆ ಶಿಕ್ಷೆ ವಿಧಿಸಿದ್ದಾರೆ.

ಪೀಡಿತ ಮಹಿಳೆ 6 ಮಂದಿ ವಿರುದ್ಧ ದೂರು ನೀಡಿದ್ದಾಳೆ. ಅದ್ರಲ್ಲಿ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಮೈದುನನ ಪ್ರೀತಿಗೆ ಬಿದ್ದ ಮಹಿಳೆಗೆ ಪತಿ ಹಾಗೂ ಮೂರು ಮಕ್ಕಳಿವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...