alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ರೋಲ್ ಗೆ ಒಳಗಾದ ಮುಖ್ಯಮಂತ್ರಿ ಪತ್ನಿ

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವೀಸ್, ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಒಂದನ್ನು ಪೋಸ್ಟ್ ಮಾಡಿ ಟ್ರೋಲ್ ಗೆ ಒಳಗಾಗಿದ್ದಾರೆ.

ಸೋಮವಾರ ಕ್ರಿಸ್ಮಸ್ ಚಾರಿಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅಮೃತಾ, ಅಲ್ಲಿ ತೆಗೆಸಿಕೊಂಡಿದ್ದ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿ, ಸಾಂತಾ ಕ್ಲಾಸ್ ಪ್ರಚಾರ ಆರಂಭಿಸಲಾಗಿದೆ. ಜನರಿಂದ ಉಡುಗೊರೆ ಪಡೆಯಲು ಅವುಗಳನ್ನು ಮಕ್ಕಳಿಗೆ ಹಂಚಲು ಯೋಜಿಸಲಾಗಿದೆ. ಉಡುಗೊರೆ ನೀಡಿ ಸಂತೋಷ ಪಡಿ ಎಂದು ಹೇಳಿದ್ದಾರೆ.

ಇದನ್ನು ಟ್ರೋಲ್ ಮಾಡಿರುವ ಕೆಲವರು, ನೀವು ಕ್ರಿಶ್ಚಿಯನ್ ಧರ್ಮ ಪ್ರಚಾರಕ್ಕೆ ಮುಂದಾದಂತಿದೆ. ಕ್ರಿಸ್ಮಸ್ ಹೆಸರಲ್ಲಿ ಕ್ರಿಶ್ಚಿಯನ್ ಧರ್ಮವನ್ನು ಪ್ರಚುರಪಡಿಸದೇ, ಹಿಂದೂ ಉತ್ಸವಗಳ ಬಗ್ಗೆ ಉತ್ತೇಜನ ನೀಡಿ ಎಂದು ಸಲಹೆ ನೀಡಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಮೃತಾ, ನಾನು ಹಿಂದೂ ಆಗಿದ್ದೇನೆ. ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ. ಎಲ್ಲಾ ಧರ್ಮೀಯರ ಉತ್ಸವಗಳನ್ನು ಆಚರಿಸುವುದು ನನ್ನ ವೈಯಕ್ತಿಕ ಆಯ್ಕೆಯಾಗಿದೆ. ಭಾರತೀಯಳಾಗಿ ನಾನು ಧರ್ಮ, ಮಾನವೀಯತೆಯನ್ನು ಬೆಂಬಲಿಸುತ್ತೇನೆ. ಇಂತಹ ವಿಷಯಗಳಲ್ಲಿ ಭಿನ್ನಾಭಿಪ್ರಾಯ ಮೂಡಿಸಬಾರದೆಂದು ಭಾವಿಸುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...