alex Certify
ಕನ್ನಡ ದುನಿಯಾ       Mobile App
       

Kannada Duniya

ಅತ್ತಿಗೆ ಅಪ್ಪಿಕೊಳ್ಳುವ ಹುಚ್ಚು ಪ್ರೀತಿಗೆ ಜೈಲು ಸೇರಿದ ಮೈದುನ

ಉತ್ತರ ಪ್ರದೇಶದ ವಾರಣಾಸಿಯಲ್ಲಿ ಆಸಕ್ತಿದಾಯಕ ಘಟನೆಯೊಂದು ನಡೆದಿದೆ. ಅತ್ತಿಗೆ ಪ್ರೀತಿ ಹುಚ್ಚಿಗೆ ಬಿದ್ದ ಮೈದುನನೊಬ್ಬ ಜೈಲು ಪಾಲಾಗಿದ್ದಾನೆ.

ಐದನೇ ತರಗತಿಯವರೆಗೆ ಓದಿದ್ದ ವ್ಯಕ್ತಿಯೊಬ್ಬನಿಗೆ ಅತ್ತಿಗೆ ಮೇಲೆ ಪ್ರೀತಿ ಹುಟ್ಟಿದೆ. ಪ್ರೀತಿ ಹುಚ್ಚಿಗೆ ವಾಸ್ತವವನ್ನು ಮರೆತಿದ್ದಾನೆ ಯುವಕ. ಅತ್ತಿಗೆ ಒಮ್ಮೆ ಅಪ್ಪಿಕೊಂಡ್ರೆ ಸಾಕು. ನಾನು ಮನೆ ಬಿಟ್ಟು ಕೆಲಸಕ್ಕಾಗಿ ಅಹಮದಾಬಾದ್ ಗೆ ಹೋಗ್ತೇನೆ ಎಂದಿದ್ದಾನೆ ಮೈದುನ. ಈತನ ಹುಚ್ಚು ಹೆಚ್ಚಾಗ್ತಿದ್ದಂತೆ ಪೊಲೀಸರಿಗೆ ದೂರು ನೀಡಿದ ಮನೆಯವರು ಮಗನನ್ನು ಜೈಲಿಗೆ ಕಳುಹಿಸಿದ್ದಾರೆ.

ಅತ್ತಿಗೆ ಒಮ್ಮೆ ಅಪ್ಪಿಕೊಂಡ್ರೆ ಸಾಕು ಎನ್ನುತ್ತಿದ್ದವನ ಮನವೊಲಿಸಲು ಪೊಲೀಸರು ಸಾಕಷ್ಟು ಪ್ರಯತ್ನಪಟ್ಟಿದ್ದಾರೆ. ಅತ್ತಿಗೆಯನ್ನು ಪೊಲೀಸ್ ಠಾಣೆಗೆ ಕರೆಯಿಸಿ ಬುದ್ಧಿವಾದ ಹೇಳಿಸಿದ್ದಾರೆ. ಯಾರು ಏನು ಹೇಳಿದ್ರೂ ಕೇಳದ ಸ್ಥಿತಿಯಲ್ಲಿದ್ದ ಯುವಕ ಒಂದೇ ಹಠ ಹಿಡಿದಿದ್ದ. ಇದ್ರಿಂದ ಬೇಸತ್ತ ಪೊಲೀಸರು ಮೈದುನನಿಗೆ ಜೈಲಿನ ದಾರಿ ತೋರಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...