alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಡಹಗಲೇ ವಿಕೃತಿ ಮೆರೆದ ಕೀಚಕರು

molest

ಉತ್ತರ ಪ್ರದೇಶದಲ್ಲಿ ಹಾಡಹಗಲೇ ಮತ್ತೊಂದು ಹೇಯ ಕೃತ್ಯ ನಡೆದಿದೆ. ಆ್ಯಂಟಿ ರೋಮಿಯೋ ಸ್ಕ್ವಾಡ್ ಇದ್ರೂ ಪೋಲಿಗಳ ಕಾಟ ಮಿತಿಮೀರಿದೆ. ರಾಂಪುರ ಜಿಲ್ಲೆಯಲ್ಲಿ ಯುವಕರ ಗುಂಪೊಂದು ಹಾಡಹಗಲೇ ಇಬ್ಬರು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದೆ.

12-14 ಯುವಕರ ಗುಂಪು ಮಹಿಳೆಯರಿಗೆ ಕಿರುಕುಳ ನೀಡ್ತಾ ಇರೋ ವಿಡಿಯೋ ಲಭ್ಯವಾಗಿದೆ. ಮಹಿಳೆಯರು ತಮ್ಮನ್ನು ಬಿಟ್ಟು ಬಿಡಿ ಅಂತಾ ಅಂಗಲಾಚಿದ್ರೂ ಪೋಲಿಗಳು ಕರುಣೆ ತೋರಿಲ್ಲ. ಯುವಕರೇ ಈ ನೀಚ ಕೃತ್ಯವನ್ನು ವಿಡಿಯೋ ಮಾಡಿ ಸಾಮಾಜಿಕ ತಾಣದಲ್ಲಿ ಹರಿಬಿಟ್ಟಿದ್ದಾರೆ.

ಮಹಿಳೆಯರನ್ನು ಅಸಭ್ಯವಾಗಿ ಸ್ಪರ್ಷಿಸುತ್ತ, ಅಶ್ಲೀಲ ಜೋಕ್ ಮಾಡಿ ನಗುತ್ತ ಯುವಕರು ವಿಕೃತಿ ಮೆರೆದಿದ್ದಾರೆ. ದೂರು ದಾಖಲಿಸಿಕೊಂಡಿರೋ ಪೊಲೀಸರು ಈಗಾಗ್ಲೇ ಒಬ್ಬನನ್ನು ಬಂಧಿಸಿದ್ದಾರೆ.

ಇಂತಹ ಕೃತ್ಯಗಳನ್ನು ತಡೆಯಲೆಂದೇ ಯೋಗಿ ಆದಿತ್ಯನಾಥ್ ಸರ್ಕಾರ ಆ್ಯಂಟಿ ರೋಮಿಯೋ ಸ್ಕ್ವಾಡ್ ಆರಂಭಿಸಿತ್ತು. ಆದ್ರೂ ಹಾಡಹಗಲಲ್ಲೇ ಪೋಲಿಗಳ ಕಾಟ ಹೆಚ್ಚಿರೋದು ಮಹಿಳೆಯರನ್ನು ಆತಂಕಕ್ಕೆ ದೂಡಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...