alex Certify
ಕನ್ನಡ ದುನಿಯಾ       Mobile App
       

Kannada Duniya

5 ವರ್ಷಗಳಲ್ಲಿ ನೋಟಾ ಚಲಾಯಿಸಿದ್ದಾರೆ 1.33 ಕೋಟಿ ಮತದಾರರು

ಮತದಾನಕ್ಕೆ ನೋಟಾ ಆಪ್ಷನ್ ಅನ್ನು 2013ರಲ್ಲಿ ಪರಿಚಯಿಸಲಾಗಿತ್ತು. ನೋಟಾದಿಂದ ಚುನಾವಣಾ ವ್ಯವಸ್ಥೆಯಲ್ಲಿ ಹೇಳಿಕೊಳ್ಳುವಂತಹ ಬದಲಾವಣೆಯೇನೂ ಆಗಿಲ್ಲ. ಆದ್ರೆ ಕಳೆದ 5 ವರ್ಷಗಳಲ್ಲಿ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳೆಲ್ಲ ಸೇರಿ 1.33 ಕೋಟಿ ಜನರು ನೋಟಾ ಚಲಾಯಿಸಿದ್ದಾರೆ.

ದಿ ಅಸೋಸಿಯೇಶನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ ಎಂಬ ಸಂಸ್ಥೆ ಈ ಅಂಕಿಅಂಶವನ್ನು ಬಿಡುಗಡೆ ಮಾಡಿದೆ. 2013-2017ರವರೆಗಿನ ನೋಟಾ ವಿವರಗಳನ್ನು ನೀಡಿದೆ. ಅಂದ್ರೆ ಕಳೆದ 5 ವರ್ಷಗಳಲ್ಲಿ ಪ್ರತಿ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಸರಾಸರಿ 2.70 ಲಕ್ಷ ಜನರು ನೋಟಾ ಚಲಾಯಿಸಿದಂತಾಗಿದೆ.

ಯಾವುದೇ ಅಭ್ಯರ್ಥಿಯ ಪರವಾಗಿ ಮತ ಚಲಾಯಿಸಲು ಇಷ್ಟವಿಲ್ಲದವರು ನೋಟಾ ಚಲಾಯಿಸಬಹುದು. ಬ್ಯಾಲೆಟ್ ಪೇಪರ್ ಹಾಗೂ ಇವಿಎಂ ಎರಡರಲ್ಲೂ ಚುನಾವಣಾ ಆಯೋಗ ಮತದಾರರಿಗೆ ನೋಟಾ ಆಪ್ಷನ್ ನೀಡುತ್ತದೆ.

2013ರಲ್ಲಿ ಮೊದಲ ಬಾರಿಗೆ ಛತ್ತೀಸ್ ಗಢ, ಮಿಜೋರಾಂ, ರಾಜಸ್ತಾನ, ದೆಹಲಿ ಮತ್ತು ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗಳಲ್ಲಿ ಮತದಾರರಿಗೆ ನೋಟಾ ಚಲಾಯಿಸಲು ಅವಕಾಶ ಕಲ್ಪಿಸಲಾಗಿತ್ತು.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...