alex Certify
ಕನ್ನಡ ದುನಿಯಾ       Mobile App
       

Kannada Duniya

ಡೇರಾದಲ್ಲಿದ್ದ ಹಣವನ್ನು ಹನಿಪ್ರೀತ್ ಎಸ್ಕೇಪ್ ಮಾಡಿದ್ಹೇಗೆ?

ಜೈಲು ಸೇರಿರುವ ಡೇರಾ ಸಚ್ಛಾ ಸೌಧದ ಮುಖ್ಯಸ್ಥ ರಾಮ್ ರಹೀಂ ಅಕ್ರಮಗಳು ಒಂದೆರಡಲ್ಲ. ತಾನು ಬೆಳೆದ ಹಣ್ಣು ತರಕಾರಿಗಳಲ್ಲಿ ಅಗಾಧ ಶಕ್ತಿಯಿದೆ ಅಂತಾ ಜನರನ್ನು ನಂಬಿಸಿ ಭಾರೀ ಮೊತ್ತಕ್ಕೆ ಅವನ್ನೆಲ್ಲ ಮಾರಾಟ ಮಾಡುತ್ತಿದ್ದ. ಹಾಗಾಗಿ ಸಹಜವಾಗಿಯೇ ಡೇರಾದಲ್ಲಿ ಕೋಟ್ಯಂತರ ರೂಪಾಯಿ ನಗದು ಇತ್ತು.

ಆದ್ರೆ ರಾಮ್ ರಹೀಂ ಜೈಲಿಗೆ ಹೋದನಂತರ ಇಡೀ ಕಟ್ಟಡವನ್ನು ಜಾಲಾಡಿದ್ರೂ ಪೊಲೀಸರಿಗೆ ಸಿಕ್ಕಿದ್ದು ಮಾತ್ರ ಕೇವಲ 12,000 ರೂಪಾಯಿ. ಉಳಿದ ಹಣವೆಲ್ಲ ಎಲ್ಹೋಯ್ತು ಅನ್ನೋ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಆ ಹಣವನ್ನೆಲ್ಲ ಸುರಕ್ಷಿತ ಜಾಗಕ್ಕೆ ಸ್ಥಳಾಂತರ ಮಾಡಿದವಳು ರಾಮ್ ರಹೀಂ ದತ್ತು ಪುತ್ರಿ ಅಂತಾ ಹೇಳಿಕೊಳ್ತಿರೋ ಹನಿಪ್ರೀತ್ ಇನ್ಸಾನ್.

ಸಪ್ಟೆಂಬರ್ 7ರಂದು ಪೊಲೀಸರು ಡೇರಾ ಸಚ್ಛಾ ಸೌಧದಲ್ಲಿ ಸ್ವಚ್ಛತೆ ಮತ್ತು ಶೋಧ ಕಾರ್ಯ ಆರಂಭಿಸಿದ್ದರು. ಅದಕ್ಕೂ 3 ದಿನ ಮೊದಲೇ ಹನಿಪ್ರೀತ್ ಹಣವನ್ನೆಲ್ಲ ಅಲ್ಲಿಂದ ಗಾಯಬ್ ಮಾಡಿಬಿಟ್ಟಿದ್ಲು. ಆಗಸ್ಟ್ 25ರಂದು ತಡರಾತ್ರಿ 2 ಗಂಟೆಗೆ ಹನಿಪ್ರೀತ್ ಡೇರಾ ಮುಖ್ಯಕಚೇರಿಗೆ ಬಂದಿದ್ದಳಂತೆ.

ರಾಮ್ ರಹೀಂನ ವಿವಾದಿತ ಗುಫಾಗೆ ಎಂಟ್ರಿ ಕೊಟ್ಟಿದ್ದಾಳೆ. ರಾಮ್ ರಹೀಂ, ಹನಿಪ್ರೀತ್ ಹಾಗೂ ಆತನ ಸಹಾಯಕ ಧರಂ ಸಿಂಗ್ ಬೆರಳಚ್ಚಿನಿಂದ ಮಾತ್ರ ಆ ಗುಹೆಯ ಬಾಗಿಲು ತೆರೆಯುತ್ತಿತ್ತು. ರಾಮ್ ರಹೀಂ ಹಾಗೂ ಧರಂ ಸಿಂಗ್ ಇಬ್ಬರೂ ಜೈಲಿನಲ್ಲಿದ್ದಿದ್ರಿಂದ ಹನಿಪ್ರೀತ್ ರಹಸ್ಯವಾಗಿ ಗುಹೆ ಪ್ರವೇಶಿಸಿದ್ದಾಳೆ.

ಅಲ್ಲಿದ್ದ ಹಣ, ದಾಖಲೆಗಳು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾಳೆ. ಹನಿಪ್ರೀತ್ ಳ ಈ ಕೃತ್ಯಕ್ಕೆ ರಾಜಕಾರಣಿಯೊಬ್ಬರು ಸಹಕರಿಸಿದ್ದಾರಂತೆ. ಹನಿಪ್ರೀತ್ ತನ್ನ ಜೊತೆಗೆ ಕೆಲವೊಂದು ಸೂಟ್ ಕೇಸ್ ಗಳನ್ನು ಹಿಡಿದುಕೊಂಡು ಓಡಾಡುತ್ತಿದ್ಲು ಅವುಗಳಲ್ಲಿ ಏನಿದೆ ಅನ್ನೋದು ಕೂಡ ರಹಸ್ಯವಾಗಿಯೇ ಇದೆ.

 

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...