alex Certify
ಕನ್ನಡ ದುನಿಯಾ       Mobile App
       

Kannada Duniya

ಹೊರಬಿತ್ತು ಜೈಲಿನಲ್ಲಿರೋ ರಾಮ್ ರಹೀಂನ ಇನ್ನೊಂದು ಸತ್ಯ

ಗುರ್ಮಿತ್ ರಾಮ್ ರಹೀಂ ಜೈಲು ಸೇರಿ 127 ದಿನಗಳು ಕಳೆದಿವೆ. ಸಾದ್ವಿಗಳಿಬ್ಬರ ಮೇಲೆ ಅತ್ಯಾಚಾರವೆಸಗಿ ಜೈಲು ಸೇರಿರುವ ರಾಮ್ ರಹೀಂ ಬಗ್ಗೆ ಮತ್ತೊಂದು ಸತ್ಯ ಹೊರ ಬಿದ್ದಿದೆ. ರಾಮ್ ರಹೀಂ ತೂಕ ಗಣನೀಯವಾಗಿ ಇಳಿಕೆಯಾಗ್ತಿದೆ ಎಂದು ಮೂಲಗಳು ಹೇಳಿವೆ.

ಪ್ರತಿದಿನ ರಾಮ್ ರಹೀಂ 120 ಗ್ರಾಂ ತೂಕ ಇಳಿಸಿಕೊಳ್ತಿದ್ದಾನೆ. ಅಲ್ಲಿನ ಆಹಾರ, ಕೆಲಸದಿಂದಾಗಿ ಆತನ ತೂಕ ಇಳಿಯುತ್ತಿದೆ. ರಾಮ್ ರಹೀಂ ಜೈಲು ಸೇರುವಾಗ 105 ಕೆ.ಜಿಯಿದ್ದ. ಜೈಲಿನ ದಿನಚರಿ ಆತನಿಗೆ ಲಾಭವಾಗ್ತಿದೆಯಂತೆ. ಬ್ಲಡ್ ಪ್ರೆಶರ್ ಸರಿಯಾಗಿದೆಯಂತೆ.

ಡೆರಾ ಸಚ್ಚಾ ಆಶ್ರಮದಲ್ಲಿ ಪ್ರತಿ ವರ್ಷ ಒಂದು ತಿಂಗಳುಗಳ ಕಾಲ ಹೊಸ ವರ್ಷಾಚರಣೆ ನಡೆಯುತ್ತಿತ್ತು. ಡಿಸೆಂಬರ್ 2ರಿಂದ ಜನವರಿ 2ರವರೆಗೆ ಕಾರ್ಯಕ್ರಮ ನಡೆಯುತ್ತಿತ್ತು. ಜನವರಿ 2ರಂದು ಸಾವಿರಾರು ಭಕ್ತರನ್ನು ರಾಮ್ ರಹೀಂ ಭೇಟಿಯಾಗ್ತಿದ್ದ. ಆದ್ರೆ ರಾಮ್ ರಹೀಂ ಈ ಬಾರಿ ಜೈಲಿನಲ್ಲಿ ಹೊಸ ವರ್ಷವನ್ನು ಸ್ವಾಗತಿಸಬೇಕಾಗಿದೆ.

ರಾಮ್ ರಹೀಂ ಕುಟುಂಬಸ್ಥರು ಗುರುವಾರ ರಾಮ್ ರಹೀಂನನ್ನು ಭೇಟಿಯಾಗಿದ್ದರು. ನಾಲ್ಕು ತಿಂಗಳಲ್ಲಿ ರಾಮ್ ರಹೀಂ ಪರ ವಕೀಲ 52 ಬಾರಿ ಭೇಟಿಯಾಗಿದ್ದಾರೆ. ಶುಕ್ರವಾರ ಕೂಡ ರಾಮ್ ರಹೀಂ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...