alex Certify
ಕನ್ನಡ ದುನಿಯಾ       Mobile App
       

Kannada Duniya

ಅತ್ಯಾಚಾರಿ ರಾಮ್ ರಹೀಂ ಜೈಲಿನಲ್ಲಿ ಗಳಿಸ್ತಾನೆ ಇಷ್ಟು ಹಣ

ಡೇರಾ ಸಚ್ಚಾ ಆಶ್ರಮದಲ್ಲಿ ಐಷಾರಾಮಿ ಜೀವನ ನಡೆಸ್ತಿದ್ದ ರಾಮ್ ರಹೀಂ ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿದ್ದಾನೆ. ರೋಹ್ಟಕ್ ಜೈಲಿನಲ್ಲಿರುವ ರಾಮ್ ರಹೀಂ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಸಂಪತ್ತಿದೆ. ಆದ್ರೆ ಜೈಲಿನಲ್ಲಿ ದಿನಕ್ಕೆ 20 ರೂಪಾಯಿ ಸಂಪಾದನೆ ಮಾಡ್ತಿದ್ದಾನೆ ರಾಮ್ ರಹೀಂ.

ರಾಮ್ ರಹೀಂಗೆ ಜೈಲಧಿಕಾರಿಗಳು 1000 ಗಜ ಜಮೀನು ನೀಡಿದ್ದಾರೆ. ಈ ಜಮೀನಿನ ಕೆಲಸವನ್ನು ರಾಮ್ ರಹೀಂ ಮಾಡ್ತಿದ್ದಾನೆ. ಮೂಲಗಳ ಪ್ರಕಾರ ರಾಮ್ ರಹೀಂ 1.5 ಕ್ವಿಂಟಲ್ ಆಲೂಗಡ್ಡೆ ಬೆಳೆದಿದ್ದಾನಂತೆ. ಇದ್ರ ಜೊತೆಗೆ ಅಲೋವೇರಾ, ಟೋಮೋಟೋ, ಸೋರೆಕಾಯಿ, ಹೀರೆಕಾಯಿ ಬೆಳೆದಿದ್ದಾನಂತೆ.

ದಿನಕ್ಕೆ ರಾಮ್ ರಹೀಂ 2 ಗಂಟೆಗಳ ಕಾಲ ಕೆಲಸ ಮಾಡ್ತಾನೆ. ಕೆಲಸದ ಹಿನ್ನೆಲೆಯಲ್ಲಿ ಕೂಲಿಯಾಗಿ ಆತನಿಗೆ 20 ರೂಪಾಯಿ ನೀಡಲಾಗುತ್ತದೆಯಂತೆ. ಆದ್ರೆ ಹಣವನ್ನು ಕೈಗೆ ನೀಡುವುದಿಲ್ಲ. ಬ್ಯಾಂಕ್ ನಲ್ಲಿರುವ ಕೈದಿಗಳ ಖಾತೆಗೆ ಹಾಕಲಾಗುತ್ತದೆ. ಬೆಳೆದ ಬೆಳೆಯನ್ನು ಜೈಲಿನ ಊಟಕ್ಕೆ ಬಳಸಲಾಗುತ್ತದೆ. ಜೈಲಿನಲ್ಲಿ ಪ್ರವಚನಕ್ಕೆ ಅವಕಾಶ ನೀಡುವಂತೆ ರಾಮ್ ರಹೀಂ ಕೇಳಿದ್ದ ಎನ್ನಲಾಗಿದೆ. ಆದ್ರೆ ಇದಕ್ಕೆ ಜೈಲಧಿಕಾರಿಗಳು ಒಪ್ಪಿಗೆ ನೀಡಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...